|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪಂಜೆ ಮಂಗೇಶ ರಾವ್ ಅವರು ಕನ್ನಡದಲ್ಲಿ ಕಥೆ, ಕವನ, ಬಾಲಸಾಹಿತ್ಯ, ಪ್ರಬಂಧಗಳನ್ನು ಬರೆದವರಲ್ಲಿ ಆದ್ಯರು. ಆಧುನಿಕ ಕನ್ನಡ ಮಕ್ಕಳ ಸಾಹಿತ್ಯದ ಪ್ರಮುಖ ಬಾಲ ಕವಿತೆ ‘ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ್ನೀವೆ ಬಾ ಬಾ ಬಾ ಬಾ ಬಾ ಬಾ‘ ಎನ್ನುವುದು ಪಂಜೆಯವರ ರಚನೆ. ಮೇಲುನೋಟಕ್ಕೆ ಹಾವಿನ ಬಗ್ಗೆ ಮಕ್ಕಳಿಗಿರಬಹುದಾದ ಭಯವನ್ನು ಹೊಡೆದೋಡಿಸುವ ಕವನದ ಹಾಗೆ ಕಂಡರೂ, ಪಂಜೆಯವರ ಮನಸ್ಸಿನಲ್ಲಿ ‘ಬ್ರಿಟಿಷರು ಹಾವಿನ ರೂಪದಲ್ಲಿ ಮನೆಮಾಡಿದ್ದರು‘ ಎಂದು ಕಾಣುತ್ತದೆ. ನಾಗರಹಾವು ಕವನದ ಕೊನೆಯ ಭಾಗವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ‘ಬರಿ ಮೈ ತಣ್ಣಗೆ, ಮನದಲಿ ಬಿಸಿ ಹಗೆ, ಎರಡೆಳೆ ನಾಲಗೆ ಇದ್ದರು ಸುಮ್ಮಗೆ, ಎರಗುವೆ ನಿನಗೆ, ಈಗಲೆ ಹೊರಗೆ, ಪೋ ಪೋ ಪೋ ಪೋ ಪೋ ಪೋ‘ ನಾಗರಹವು ಶೀತರಕ್ತದ ಪ್ರಾಣಿ. ಹಾಗಾಗಿ ಅದರ ಮೈ ತಣ್ಣಗೆ ಇರುತ್ತದೆ. ಬ್ರಿಟಿಷರು ವ್ಯಾಪಾರಕ್ಕಾಗಿ ಬಂದವರಂತೆ ಕಂಡರೂ ಸಹ ಅವರ ಮನಸ್ಸಿನಲ್ಲಿ ಭಾರತದ ಅಷ್ಟೂ ಸಂಪತ್ತನ್ನು ದೋಚುವ ದುರಾಲೋಚನೆಯಿತ್ತಲ್ಲವೆ!
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|