Items
0
Total
  0.00 
Welcome Guest.

 
Rs. 486    
15%
Rs. 413/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 801
ಪುಸ್ತಕದ ಗಾತ್ರ : 1/8 Demy Size
ಕೋಡ್ : 187192

ಪ್ಯಾಪಿಲಾನ್ ಕೃತಿಯಲ್ಲಿ ಭೂಗತ ಜಗತ್ತಿನ ಅನೇಕ ವೃತ್ತಾಂತಗಳು ಇದೆಯಾದರೂ ಇದು ಮೂಲತಃ ಸ್ವಾತಂತ್ರ್ಯಕ್ಕಾಗಿ ಮನುಷ್ಯನೊಬ್ಬನ ಅದಮ್ಯ ಹೋರಾಟದ ಕಥೆ. ಈ ಕಥೆ ಪ್ರಾರಂಭವಾಗುವುದು ಫ್ರಾನ್ಸಿನ ರಾಜಧಾನಿ ಪ್ಯಾರಿಸ್ಸಿನಿಂದ. ಯಾವ ತಪ್ಪನ್ನೂ ಮಾಡಿಲ್ಲದ ಕೊಲೆ ಪ್ರಕರಣಕ್ಕೆ ಸಂಬಂಧವೇ ಇಲ್ಲದೆ ಎಲ್ಲೋ ಇದ್ದ ಒಬ್ಬ ತರುಣನನ್ನು (ಪ್ಯಾಪಿಲಾನ್) ನಿಷ್ಕಾರಣವಾಗಿ ಫ್ರೆಂಚ್ ಪೊಲೀಸರೂ, ಸರ್ಕಾರೀ ಲಾಯರುಗಳೂ ಸೇರಿ ಪಿತೂರಿ ಮಾಡಿ, ಜೀವಾವಧಿಶಿಕ್ಷೆ ವಿಧಿಸುವಂತೆ ಮಾಡಿ, ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನದ ಕಾರಾಗೃಹ ದ್ವೀಪಗಳಿಗೆ ಗಡೀಪಾರು ಮಾಡಿಸುತ್ತಾರೆ. ಸುತ್ತ ವಿಶಾಲ ಸಾಗರದಿಂದ ಸುತ್ತುವರಿದಿದ್ದ ಈ ದ್ವೀಪಗಳಿಂದ ಪ್ಯಾಪಿಲಾನ್‍ನ ಹದಿಮೂರು ವರ್ಷಗಳ ನಿರಂತರ ಹೋರಾಟ ಆರಂಭವಾಗುತ್ತದೆ. ಸೆರೆಯಿಂದ ತಪ್ಪಿಸಿಕೊಂಡು ಪಲಾಯನ ಮಾಡುವುದೊಂದೇ ಮೂಲ ಮಂತ್ರವಾಗಿದ್ದ ಪ್ಯಾಪಿಲಾನ್ ಅನೇಕ ಬಾರಿ ಮೈ ನವಿರೇಳಿಸುವಂಥ ಸಾಹಸ ಮಾಡಿ ಪಲಾಯನ ಮಾಡುತ್ತಾನೆ. ಇದೊಂದು ಇಪ್ಪತ್ತನೆಯ ಶತಮಾನದ ಸರ್ವಶ್ರೇಷ್ಠ ಸಾಹಸದ ಸತ್ಯ ಕಥೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
10%
ಜೀವನ ಸಂಗ್ರಾಮ (ಮಿಲನಿಯಮ್ ....
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 87    Rs. 78
Rs. 120    Rs. 108
Best Sellers
ಜೇನು ಕಲ್ಲಿನ ರಹಸ್ಯ ಕಣಿವೆ (ಮಲೆನಾಡಿನ ರೋಚಕ ಕತೆಗಳು - ೪)
ಗಿರಿಮನೆ ಶ್ಯಾಮರಾವ್, Girimane Shyamarao
Rs. 117/-   Rs. 130
ಪ್ರಾಣಿಗಳ, ಮನುಷರ, ವಾಹನಗಳ ಮತ್ತು ಪಕ್ಷಿಗಳ ಚಿತ್ರ ಬಿಡಿಸಿರಿ (Combo)
ಪುಂಡಲೀಕ ವಜೆ, Pundalik Vaze
Rs. 171/-   Rs. 190
ABC Handwriting Book : Samll Writing

Rs. 41/-   Rs. 45
ವನ್ಯಜೀವಿಗಳ ಜಾಡು ಹಿಡಿದು
ಸಂಜಯ್ ಗುಬ್ಬಿ, Sanjay Gubbi
Rs. 117/-   Rs. 130

Latest Books
ನೀವು ದೇವರನ್ನು ನಂಬಬೇಡಿ
ಜೋಗಿ, Jogi
Rs. 162/-   Rs. 180
ರಾಹುಲ ಸಾಂಕೃತ್ಯಾಯನ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ನಾಳೀನ ಚಿಂತ್ಯಾಕ (ಕಲಾವಿದೆ ಶಾಂತಾ ಹುಬಳೀಕರ ಅವರ ಆತ್ಮಚರಿತ್ರೆ)
ಶಾಂತಾ ಹುಬಳೀಕರ, Shantha Hubalikar
Rs. 113/-   Rs. 125
ದಿಲ್ಲಿ ಡೈರಿಯ ಪುಟಗಳು
ರೇಣುಕಾ ನಿಡಗುಂದಿ, Renuka Nidagundi
Rs. 126/-   Rs. 140


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.