
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಂಶಿ ಪಬ್ಲಿಕೇಷನ್ಸ್, Vamshi Publications |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
272 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788193841556 |
ಕೋಡ್ |
: |
1118391 |
Holy Cancer How a Cow Saved My Life ಕೃತಿಯ ಲೇಖಕರಾದ ಅಮಿತ್ ವೈದ್ಯ ಅವರು ಮೂಲತಃ ಗುಜರಾತಿನವರು. ಆದರೆ ಹುಟ್ಟಿ, ಬೆಳೆದಿದ್ದೆಲ್ಲ ಅಮೆರಿಕದಲ್ಲಿ. ಇಪ್ಪತ್ಮೂರನೇ ವಯಸ್ಸಿಗೇ ಕ್ಯಾನ್ಸರ್ ರೋಗಿಯಾದ ಇವರು, ಅಷ್ಟು ಹೊತ್ತಿಗಾಗಲೇ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡಿದ್ದರು. ಈ ಪೈಕಿ ಇವರ ತಾಯಿಯನ್ನು ಬಲಿ ಪಡೆದಿದ್ದು ಕೂಡ ಕ್ಯಾನ್ಸರ್ ರೋಗವೇ ಆಗಿತ್ತು. ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಮೇಲೆ ಅದನ್ನು ಮಣಿಸಲೇಬೇಕೆಂದು ಛಲದಿಂದ ನಡೆಸಿದ ಹೋರಾಟ ಮತ್ತು ಬದುಕುಳಿಯಬೇಕೆಂಬ ಅದಮ್ಯ ಜೀವನೋತ್ಸಾಹದ ಕಥನ ಈ ಆತ್ಮವೃತ್ತಾಂತ. ಇದರಲ್ಲಿ ಕೇವಲ ಕ್ಯಾನ್ಸರ್ ಕುರಿತ ಮಾಹಿತಿಯಷ್ಟೇ ಇಲ್ಲ. ಬದಲಿಗೆ, ಸೂಕ್ತ ಚಿಕಿತ್ಸೆಯ ಹುಡುಕಾಟ, ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ದ್ವಂದ್ವಗಳು, ಅಂತರಂಗದ ತುಮುಲಗಳು, ಸಮಾಜದಲ್ಲಿ ಬೇರೂರಿರುವ ಕ್ರೌರ್ಯ, ಸ್ವಾರ್ಥ, ಸಂಕುಚಿತ ಧೋರಣೆಗಳು, ಇವುಗಳ ಪರಿಣಾಮವಾಗಿ ಮನುಷ್ಯನಲ್ಲಿ ಹುಟ್ಟಿಕೊಳ್ಳುವ ಅಸಹಾಯಕತೆ, ಸಾವಿನ ಭಯ, ಯಾರ ಆಸರೆಯ ಭರವಸೆಯೂ ಇಲ್ಲದಿದ್ದಾಗ ಅಚಾನಕ್ಕಾಗಿ ಸಿಗುವ ಸಹಾಯ….. ಇವೆಲ್ಲವನ್ನೂ ಅಮಿತ್ ವೈದ್ಯ ಈ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಇಷ್ಟರ ಮಧ್ಯೆ ವೈದ್ಯ ಅವರು, ಕ್ಯಾನ್ಸರ್ನಿಂದ ಗುಣಮುಖರಾದ ಮೇಲೆ ಈ ಬಗ್ಗೆ ಜಾಗೃತಿ ಮೂಡಿಸಲು ಕೆಲಕಾಲ ಒಂದು ಎನ್ಜಿಒವನ್ನು ಕೂಡ ನಡೆಸಿದ್ದಾರೆ.
ಒಂದು ಕಾಲದಲ್ಲಿ -ಕೇವಲ 30-40 ವರ್ಷಗಳ ಹಿಂದೆ- ಯಾರೂ ಆರೋಗ್ಯದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ, ಆಗ ಹೆಚ್ಚಾಗಿ ಬರುತ್ತಿದ್ದ ಕಾಯಿಲೆಗಳೆಂದರೆ ಜ್ವರ, ಮಲೇರಿಯಾ, ಟೈಫಾಯ್ಡ್ ಅಷ್ಟೆ. ಅಬ್ಬಬ್ಬಾ ಅಂದರೆ, ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಲಕ್ವಾ ಹೊಡೆದು ಮಲಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ತದ್ವಿರುದ್ಧ. ಈಗ ಕಿಡ್ನಿ ವೈಫಲ್ಯ, ಲಿವರ್ ಕೈಕೊಡುವುದು, ಹೃದಯದ ಸ್ಥಿತಿ ಏರುಪೇರಾಗುವುದು, ಇದಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ತುಂಬಾ ಭಯಾನಕವಾಗಿವೆ. ಹೀಗಾಗಿ, `If Health is Lost Something is Lost’ ಎನ್ನುವ ಮಾತು ಹಳೆಯದಾಗಿದೆ. ಈಗ, If Health is Lost Everything will be Lost ಎನ್ನುವುದೇ ದೊಡ್ಡ ಸತ್ಯ! ಏಕೆಂದರೆ, ಕಾಯಿಲೆ ಬಿದ್ದರೆ ಚಿಕಿತ್ಸೆ ಕೈಗೆಟುಕುವುದಿಲ್ಲ; ಗಂಡ-ಹೆಂಡತಿ-ಮಗುವಿನ ಚಿಕ್ಕ-ಚೊಕ್ಕ ಸಂಸಾರದಲ್ಲಿ ನೋಡಿಕೊಳ್ಳಲು ಯಾರೂ ಇರುವುದಿಲ್ಲ; ಕೆಲಸಕ್ಕೆ ಹೋಗುತ್ತಿದ್ದ ಕಂಪನಿಯ ಬಾಗಿಲು ನಮ್ಮ ಪಾಲಿಗೆ ತೆರೆಯುವುದಿಲ್ಲ; ದೂರದ ಯಾವುದೋ ದೇಶದಲ್ಲಿರುವ ಮಕ್ಕಳಿಗೆ ಯಾರೂ ಬೇಕಾಗುವುದಿಲ್ಲ; ನೆಂಟರಿಷ್ಟರು ಕಣ್ಣೆತ್ತಿಯೂ ನೋಡುವುದಿಲ್ಲ. ಸರಿಸರಿ ಇದ್ದರೆ ಮಾತ್ರ ಪರಿಪರಿ ನೆಂಟರು! ಇನ್ನು ಮಕ್ಕಳಿಗೇ ಏನಾದರೂ ಬರಬಾರದ ಕಾಯಿಲೆ ಬಂದರೆ, ಅವರ ತಂದೆ-ತಾಯಿಯ ಗೋಳು ಯಾವ ಶತ್ರುವಿಗೂ ಬೇಡ!
ಇಲ್ಲಿ ಕ್ಯಾನ್ಸರ್ಪೀಡಿತನೊಬ್ಬ ಅದನ್ನು ಮಣಿಸಿದ ಕತೆ ಇದೆ, ನಿಜ. ಆದರೆ, ಅದೊಂದು ನಿಮಿತ್ತ ಮಾತ್ರ. ಆ ಕಾಯಿಲೆಯ ಬದಲು ಯಾವ ಕಾಯಿಲೆ ಬಂದರೂ ಮನುಷ್ಯನ ಸ್ಥಿತಿ ಇಷ್ಟೆ. ಆ ಒದ್ದಾಟ, ಆ ಸಂಕಟ, ಆ ಅಸಹಾಯಕತೆ, ಆ ದ್ವಂದ್ವಗಳು, ಸಮಾಜದ ಆ ಪರಿಯ ಕ್ರೌರ್ಯ…… ಇವೆಲ್ಲವನ್ನೂ ಬದುಕು ಆಗ ತೋರಿಸಿ, ಜಗತ್ತಿನ ಅಸಲಿ ಬಣ್ಣವೇನೆಂದು ಗೊತ್ತಾಗುತ್ತದೆ. ಆದರೂ ಬದುಕಬೇಕೆಂಬ ಉತ್ಸಾಹವಿದ್ದರೆ ದಾರಿ ತಂತಾನೇ ತೆರೆದುಕೊಳ್ಳುತ್ತದೆ; ನಂಬಿಕೆ ಹುಟ್ಟುತ್ತದೆ; ಗೆಲುವು ನಮ್ಮ ಕೈ ಹಿಡಿಯುತ್ತದೆ. ಇದು ಹೃದಯಸ್ಪರ್ಶಿಯೂ ಹೌದು; ಹೃದಯ ವಿದ್ರಾವಕವೂ ಹೌದು. ಕಾಯಿಲೆಗೆ ನಾವು ಮಣಿಯಬಾರದು; ಕಾಯಿಲೆಯೇ ನಮಗೆ ಮಣಿಯಬೇಕು! ಇದೇ ಈ ಕೃತಿಯ ತಾರಕಮಂತ್ರ!!
|
| | |
|
|