|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಾಣಾಯಾಮ
ಈ ಪುಸ್ತಕವು ಪ್ರಾಣಾಯಾಮದ ಪ್ರಾಥಮಿಕ ವಿಧಾನಗಳಷ್ಟೇ ಅಲ್ಲದೆ ಮುಂದುವರೆದ ವಿಧಾನಗಳಿಗೂ ಕೈಪಿಡಿಯಾಗಿದೆ. ಪ್ರತಿಯೊಂದು ಅಭ್ಯಾಸ ಕ್ರಮಕ್ಕೂ ಸೂಚನೆಗಳು ನಿರ್ದಿಷ್ಟವಾಗಿವೆ ಹಾಗೂ ಸ್ಪಷ್ಟತೆಯಿಂದ ಕೂಡಿವೆ. ಪ್ರಾಣಾಯಾಮದ ಕುರಿತಾಗಿ ಇರುವ ಪುಸ್ತಕಗಳಲ್ಲಿ "ಪ್ರಾಣಾಯಾಮ ಪ್ರಕಾಶಿಕಾ" ಅತ್ಯುತ್ತಮ ಸೇರ್ಪಡೆಯೆನ್ನಬಹುದು. ಡಾ. ಓಂಕಾರ್ರವರು ಯೋಗ ಹಾಗೂ ಆಧ್ಯಾತ್ಮಿಕ ಜಗತ್ತಿಗೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ.
(ಜಸ್ಟಿಸ್ಎಮ್. ಎನ್. ವೆಂಕಟಾಚಲಯ್ಯ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು)
ಪ್ರಾಣಾಯಾಮದ ಬಗ್ಗೆ ಆಸಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಗಪಟು ಓಂಕಾರ್ ಅವರು ಈ ಪುಸ್ತಕವನ್ನು ರೂಪಿಸಿ ಹೊರತಂದಿದ್ದಾರೆ. ಅದನ್ನು ಕಲಿಯುವ ಬಗೆ ಹೇಗೆಂಬ ವಿವರಗಳನ್ನು ಇಪ್ಪತ್ತನಾಲ್ಕು ಅಧ್ಯಾಯಗಳಲ್ಲಿ ಸಾದರಪಡಿಸಿದ್ದಾರೆ. ಪ್ರಾಣಾಯಾಮವನ್ನು ಅನುಷ್ಠಾನ ಮಾಡುವ ಕ್ರಮ ಹೇಗೆ - ಇತ್ಯಾದಿ ವಿಚಾರಗಳನ್ನು ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ. ಅವಸರವಿಲ್ಲದ ಸರಳ ನಿರೂಪಣೆಯಿಂದ ಕೂಡಿದ ಇಂಥ ಪುಸ್ತಕಗಳು ಸಮಾಜಕ್ಕೆ ದೊಡ್ಡ ಕೊಡುಗೆ. ಅಂಥವರಿಗೆಲ್ಲ ಕೈಪಿಡಿಯಾಗುವಂಥ ಈ ಪುಸ್ತಕದ ಕರ್ತೃ ಡಾ. ಓಂಕಾರ್ ಅವರಿಗೆ ಅಭಿನಂದನೆಗಳು.
(ಡಾ. ಸಂಧ್ಯಾ ಪೈ, ವ್ಯವಸ್ಥಾಪಕ ಸಂಪಾದಕರು, "ತರಂಗ" ವಾರಪತ್ರಿಕೆ)
ಈ ಪುಸ್ತಕವನ್ನು ಸಮಗ್ರವಾಗಿ ಅವಲೋಕಿಸಿದಾಗ ಪ್ರಾಣಾಯಾಮದ ಎಲ್ಲಾ ವಿವರಣೆಗಳನ್ನು ಒಳಗೊಂಡ ಸಂಕ್ಷಿಪ್ತ ಪುಸ್ತಕವೆಂದು ತಿಳಿಸಲು ಸಂತೋಷವಾಗುತ್ತದೆ ಹಾಗೂ ಡಾ. ಓಂಕಾರ್ ಅವರು ಈ ಬಗೆಯ ಇನ್ನೂ ಅನೇಕ ಪುಸ್ತಕಗಳನ್ನು ಹೊರತರುವರೆಂದು ನಂಬಿದ್ದೇನೆ. ಡಾ. ಎಸ್. ಎನ್. ಓಂಕಾರ್ ಅವರಿಗೆ ತಮ್ಮ ಮುಂದಿನ ಎಲ್ಲ ಕೈಂಕರ್ಯಗಳಲ್ಲೂ ಶುಭವಾಗಲೆಂದು ಹಾರೈಸುತ್ತೇನೆ. ಸಪ್ರೇಮಗಳೊಂದಿಗೆ.
(ಡಾ. ಎಚ್. ಆರ್. ನಾಗೇಂದ್ರ, ಕುಲಾಧಿಪತಿಗಳು, ಎಸ್-ವ್ಯಾಸಯೋಗ ವಿಶ್ವವಿದ್ಯಾಲಯ, ಬೆಂಗಳೂರು.)
ಡಾ. ಓಂಕಾರ್ರವರು ಪ್ರಾಣಾಯಾಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುತ್ತಾರೆ. ಸ್ವಂತ ಅನುಭವಗಳ ಆಧಾರದ ಮೇಲೆ ಈ ಪುಸ್ತಕವನ್ನು ಬರೆದಿರುತ್ತಾರೆ. ಅವರಿಗೆ ಅಭಿನಂದನೆಗಳು. ಓದುಗರಲ್ಲಿ ಆಸಕ್ತಿ ಮೂಡಿಸಿ ಇನ್ನೂ ಹಲವಾರು ಯೋಗಸಾಧಕರನ್ನು ರೂಪಿಸುವುದರಲ್ಲಿ ಈ ಪುಸ್ತಕ ಸಹಕಾರಿ.
ಬಿ. ಎನ್. ಗಂಗಾಧರ್, ಎಮ್ ಡಿ, ಡಿಎಸ್ ಸಿ, ಪೆÇ್ರಫೆಸರ್ಆಫ್ ಸೈಕಿಯಾಟ್ರಿ ಮತ್ತು ಡೈರೆಕ್ಟರ್, ನಿಮ್ಹಾನ್ಸ್, ಪೆÇ್ರಗ್ರಾಮ್
ಡೈರೆಕ್ಟರ್, ನಿಮ್ಹಾನ್ಸ್ ಇಂಟಗ್ರೇಟೆಡ್ ಸೆಂಟರ್ ಫಾರ್ ಯೋಗ (ಎನ್ ಐ ಸಿ ವೈ)
|
| |
|
|
|
|
|
|
|
|
|