Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 125   
10%
 
 
Rs. 113/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 184
ಪುಸ್ತಕದ ಗಾತ್ರ : 1/8 Demy Size
ISBN : 9788189888343
ಕೋಡ್ : 191087

ನಮ್ಮ ಭಾರತದಲ್ಲಿ ಎಲ್ಲಾ ಬಗೆಯ ಸಾಮರ್ಥ್ಯ ಇದೆ, ಪರಿಣತಿ ಇದೆ, ಪ್ರತಿಭೆ ಇದೆ, ಮೇಧಾಶಕ್ತಿ ಇದೆ, ಸಂಪನ್ಮೂಲಗಳಿವೆ. ಇಷ್ಟೆಲ್ಲ ಇದ್ದೂ ಕೂಡ ನಮ್ಮ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಇನ್ನೂ ಏರಿಲ್ಲ ಯಾಕೆ? ನಾವು ಎಲ್ಲಿ ತಪ್ಪಿದ್ದೇವೆ? ನಮ್ಮಲ್ಲಿರುವ ಕೊರತೆಯಾದರೂ ಏನು? ಎಪಿಜೆ ಅಬ್ದುಲ್ ಕಲಾಂ ಅವರ `ಪ್ರಜ್ವಲಿತ ದೀಪಗಳು` ಇಂಥ ಅಂಶಗಳನ್ನೆಲ್ಲ ಚಿಂತನೆಯ ಒರೆಗಲ್ಲಿಗೆ ಹಚ್ಚುತ್ತದೆ.

ಉತ್ತಮವಾದ ಬಾಳ್ವೆ ನಡೆಸುವ ಕನಸು ಯಾರಿಗಿಲ್ಲ? ಅಂಥ ಕನಸನ್ನ ಸಾಕಾರಗೊಳಿಸಲು ದೇಶದ ಜನರಿಂದ ಖಂಡಿತ ಸಾಧ್ಯ. ಅದಕ್ಕೆ ಅಗತ್ಯವಾದ ಅಂತಃಶಕ್ತಿ, ಸಾಮರ್ಥ್ಯಗಳನ್ನು ಅವರು ಹೊಂದಿರುತ್ತಾರೆ. `ಪ್ರಜ್ವಲಿತ ದೀಪಗಳು` ಈ ಸತ್ಯವನ್ನು ಬಲವಾಗಿ ಪ್ರತಿಪಾದಿಸುತ್ತದೆ. ನಮ್ಮ ಅಂತಃಶಕ್ತಿಯನ್ನು ಕಂಡುಕೊಳ್ಳೂವಲ್ಲಿ ಈ ಪುಸ್ತಕವು ನಮಗೆ ನೆರವಾಗಬಲ್ಲದು, ವಿಜಯದ ಹದಿಯನ್ನು ತೋರಬಲ್ಲದು.

ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ೨೦೦೨ರಿಂದ ೨೦೦೭ರ ವರೆಗೆ ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿದ್ದರು. ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದವರು. ೧೯೩೧ರಲ್ಲಿ ತಮಿಳುನಾಡಿನ ರಾಮೇಶ್ವರದ್ಲ ಜನಿಸಿದ ಡಾ. ಕಲಾಂ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತರು. ಭಾರತವನ್ನು ಬಾಹ್ಯಾಕಾಶ ಯಾನದ ರಾಷ್ಟ್ರಗಳ ಸಾಲಿಗೆ ಸೇರಿಸಿದ ರೋಹಿಣಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ ಎಸ್‌ಎಲ್‌ವಿ-೩ ರಾಕೆಟ್ ಉಡಾವಣಾ ವಾಹನವನ್ನು ವಿನ್ಯಾಸ ಮಾಡಿ ಅಭಿವೃದ್ಧಿಪಡಿಸುವುದರಲ್ಲಿ ಕಲಾಂ ಮಹತ್ವದ ಪಾತ್ರ ವಹಿಸಿದರು. ಭಾರತದ ಯುದ್ಧಾನುಕೂಲದ ಕ್ಷಿಪಣಿ ವ್ಯವಸ್ಥೆಗಳ ರಚನೆಯಲ್ಲೂ ಅವರದೇ ಪ್ರಧಾನ ಪಾತ್ರ, ಹಾಗೂ ೧೯೯೮ರ ಪರಮಾಣು ಸರಣಿ ಪರೀಕ್ಷೆಗಳಲ್ಲೂ ಅವರು ಮಹತ್ವದ ಪಾತ್ರ ವಹಿಸಿದರು. ತಂತ್ರಜ್ಞಾನ ಮಾಹಿತಿ, ಭವಿಷ್ಯಗ್ರಹಣ ಹಾಗೂ ಅಂದಾಜು ಮಂಡಯ (ಟೆಕ್ನಾಲಜಿ ಇನ್‌ಫರ್ಮೇಷನ್, ಫೋರ್‌ಕಾಸ್ಟಿಂಗ್ ಅಂಡ್ ಅಸೆಸ್‌ಮೆಂಟ್ ಕೌನ್ಸಿಲ್ - ಟಿಐಎಫ್‌ಎಸಿ) ಅಧ್ಯಕ್ಷರಾಗಿ ಹಾಗೂ ಓರ್ವ ಗಣ್ಯ ವಿಜ್ಞಾನಿಯಾಗಿ ೫೦೦ ಮಂ ತಜ್ಞರ ಸಹಾಯದೊಂಗೆ ಅವರು ೨೦೨೦ರ ತಂತ್ರಜ್ಞಾನ ಕಾಣ್ಕೆಯನ್ನು ರೂಪಿಸಿದರು. ಇದು ಭಾರತವನ್ನು ಒಂದು ಮುಂದುವರಿದ ರಾಷ್ಟ್ರವಾಗಿ ರೂಪಿಸುವುದಕ್ಕೆ ಮಾರ್ಗೋಪಾಯಗಳನ್ನೂ ನೀಲಿನಕ್ಷೆಯನ್ನೂ ಹಾಕಿಕೊಟ್ಟಿತು. ಸಲಹೆ ಕೊಡುತ್ತ, ಜನರೊಡನೆ ಸಂಪರ್ಕ ಬೆಳೆಸುತ್ತ ಮತೀಯ ಹಾಗೂ ಸಾಮಾಜಿಕ ವೈಷಮ್ಯಗಳು ನಿರ್ಮಾಣವಾದಲ್ಲೆಲ್ಲ ಅವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತ ಕಲಾಂ ಅವರು ಇಂದು ಸಾಮಾಜಿಕ ಕ್ಷೇತ್ರಗಳಲ್ಲೂ ಜನ ಸಾಮಾನ್ಯರ ಕಣ್ಮಣಿಯಾಗಿದ್ದಾರೆ. ಭಾರತವನ್ನು ೨೦೨೦ರ ವೇಳೆಗೆ ಮುಂದುವರಿದ ರಾಷ್ಟ್ರವಾಗಿ ರೂಪಿಸುವ ಕನಸನ್ನು ಅವರು ಎಡೆಬಿಡದೆ ಹಿಂಬಾಸಿದ್ದಾರೆ. ಇದಕ್ಕಾಗಿ ಅವರು ದೇಶಾದ್ಯಂತ ಸುತ್ತಿ ಕಮ್ಮಟಗಳಲ್ಲೂ ಸೆಮಿನಾರುಗಳಲ್ಲೂ ಭಾಗವಹಿಸಿ ತಜ್ಞರನ್ನೂ ಯುವ ಜನಾಂಗದವರನ್ನೂ ಹುರಿದುಂಬಿಸುತ್ತಿದ್ದಾರೆ. ತಂತ್ರಜ್ಞಾನ ಸಂಸ್ಥೆಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ಐಐಟಿ ಮತ್ತು ಐಐಎಂಗಳಲ್ಲಿಯೂ ಉಪನ್ಯಾಸಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
10%
ಮಹತ್ವದ ಮಾರ್ಗಗಳು : ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 160    Rs. 144
10%
ಟರ್ನಿಂಗ್ ಪಾಯಿಂಟ್ಸ್ - ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 170    Rs. 153
Rs. 160    Rs. 144
Best Sellers
ಕನ್ನಡ ವ್ಯಾಕರಣವನ್ನು ಕಲಿಸುವುದು ಹೇಗೆ
ಶಂಕರ ಭಟ್ ಡಿ ಎನ್, Shankar Bhat D N
Rs. 113/-   Rs. 125
ಮೊಪಾಸನ ಕಥೆಗಳು--ಭಾಗ-1 (ಸಣ್ಣ ಕಥೆಗಳು)
ಮೊಪಾಸ ಏ ದ, Guy De Maupassant
Rs. 428/-   Rs. 450
ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ
ಪೆರಿಯಾರ್, Periyar
Rs. 54/-   Rs. 60
ನಿಜಲಿಂಗ (ಕಾದಂಬರಿ) ಕುಂ ವೀರಭದ್ರಪ್ಪ
ವೀರಭದ್ರಪ್ಪ ಕುಂ, Veerabhadrappa Kum
Rs. 180/-   Rs. 200

Latest Books
ತಿಳಿರು ತೋರಣ ಪರ್ಣಮಾಲೆ ಭಾಗ - ೨ : ಲೇಖನಗಳು
ಶ್ರೀವತ್ಸ ಜೋಶಿ, Srivathsa Joshi
Rs. 198/-   Rs. 220
ದಿ ಆರ್ಟಿಸ್ಟ್
ಮೈಕೆಲ್ ಹಜನವಿಸಿಯಸ್, Michel Hazanavicius
Rs. 54/-   Rs. 60
ಸಾಮಾನ್ಯ ಜ್ಞಾನ (General Knowledge IAS, KAS)
ಗೈಡ್ ಸಂಪಾದಕೀಯ ಮಂಡಳಿ, Guide Editorial Board
Rs. 225/-   Rs. 250
ಹಂಸ ಏಕಾಂಗಿ : ಕಬೀರನ ಪದಗಳು
ಕೇಶವ ಮಳಗಿ, Keshava Malagi
Rs. 158/-   Rs. 175


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.