|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಿ.ಕೆ.ಎಸ್. ಅಯ್ಯಂಗಾರರು ರಚಿಸಿರುವ ‘ಪ್ರಾಣಾಯಾಮ ದೀಪಿಕಾ’ ಪುಸ್ತಕವು ನಮ್ಮ ಪುರಾತನ ವಿಜ್ಞಾನವಾದ ಯೋಗಶಾಸ್ತ್ರದ, ಇಂದಿನ ದಿನಗಳಿಗೆ ಹೊಂದಿಕೊಳ್ಳುವ, ಹೊಚ್ಚಹೊಸ ರೂಪ. ಉಸಿರಿನ ಸೂಕ್ಷ್ಮ ಸಂಚಲನೆ, ವಿವಿಧ ರೀತಿಯ ಪೂರಕ, ಕುಂಭಕ, ರೇಚಗಳ ರೀತಿ ನೀತಿ, ಕಡುಗೆಂಪು ಬಣ್ಣದ ರಸವಾಹಿನಿಯ ಕಶ್ಮಲ ಶೋಧನೆ ಹಾಗೂ ನಾಡಿಗಳ ಮೂಲಕ ಸೂಕ್ಷ್ಮವಾದ ಚಕ್ರಗಳೊಳಗೆ ಅದರ ಪ್ರವಹನ - ಇವೆಲ್ಲದರ ವಿವರಣೆಯನ್ನು ಈ ಪುಸ್ತಕ ಒಳಗೊಂಡಿದೆ.
ಪ್ರಕೃತಿ ಚೈತನ್ಯವನ್ನು ಚುರುಕುಗೊಳಿಸುವ, ಐದು ವಿವಿಧ ರೂಪಗಳಲ್ಲಿ ಅದು ವ್ಯಕ್ತವಾಗುವ ವಿವರಣೆಗಳು ಇದರಲ್ಲಿದೆಯಲ್ಲದೆ, ವಿಧಿ ನಿಷೇಧಗಳ ವರ್ಣನೆಯೂ ಮೂಡಿಬಂದಿದೆ. ಪ್ರಾಣಾಯಾಮದ ನಿಷ್ಠ ಸಾಧಕರಿಗೆ ಈ ಪುಸ್ತಕವು ಅಮೂಲ್ಯವೆನಿಸುವಂಥದು. ವಿಚಾರಪ್ರಚೋದಕವಾದ ಈ ಗ್ರಂಥವು ವಿದ್ವಾಂಸರ ಮನಸ್ಸನ್ನೂ ಆಹ್ಲಾದಿಸುವಂತಹದು. ಯೋಗಶಾಸ್ತ್ರ ವಿವರಣೆಯ ಗ್ರಂಥಗಳ ಮಾಲಿಕೆಯಲ್ಲಿ ಇದೊಂದು ಅಮೂಲ್ಯ ರತ್ನ.
|
| |
|
|
|
|
|
|
|
|
|