Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ISBN : 9789382348320
ಕೋಡ್ : 1120559

ಹಾಸ್ಯ ಪ್ರವೃತ್ತಿಯ ಜೊತೆಗೆ ಕವನ, ಕಿರು-ಕತೆ, ನಗೆಹನಿ, ಚುಟುಕುಗಳು ಮತ್ತು ಆಕರ್ಷಕ ನುಡಿಮುತ್ತುಗಳು ಮುಂತಾದವುಗಳನ್ನು ಬರೆದುಕೊಂಡು, ಒಂದೆಡೆ ಸಂಗ್ರಹಿಸಿಟ್ಟುಕೊಳ್ಳುವುದು ನಾನು ಮೊದಲಿನಿಂದಲೂ ಬೆಳೆಸಿಕೊಂಡು ಬಂದಿರುವ ಹವ್ಯಾಸ.

ಶ್ರೀ ಗಂಗಾವತಿ ಪ್ರಾಣೇಶ ಗುರುಗಳ ಹಾಸ್ಯ ಭಾಷಣದಿಂದ ಸಾಕಷ್ಟು ಪ್ರಭಾವಿತಗೊಂಡ ನಾನು, ಪತ್ರಿಕಾರಂಗದ ದಿಗ್ಗಜರಾದ ಶ್ರೀ ವಿಶ್ವೇಶ್ವರ ಭಟ್ಟರ ಅಂಕಣಗಳ ಅತ್ಯಂತ ಪ್ರೀತಿಯ ಓದುಗನೂ ಹೌದು. ಅವರ ವಿಶ್ವವಾಣಿಯಲ್ಲಿ ಹಾಸ್ಯಗುರು ಪ್ರಾಣೇಶರವರ ‘ಪ್ರಾಣೇಶ್ ಪ್ರಪಂಚ’ ಅಂಕಣಗಳನ್ನು ಓದುತ್ತಾ ಬಂದ ಹಾಗೆ, ಕೇವಲ ಓದಿ ಬಿಡದೇ ಬರೆದಿಟ್ಟುಕೊಳ್ಳುವಂತಹ ಸಾಕಷ್ಟು ಆಕರ್ಷಕ ನುಡಿಸಾಲುಗಳನ್ನು ಅವುಗಳಲ್ಲಿ ಕಂಡುಕೊಂಡೆ. ಸಹಜವಾಗಿ ಅಂಥವುಗಳನ್ನು ಸಂಗ್ರಹಿಸುತ್ತಾ ಬಂದೆ. ಒಂದು ದಿನ ಪ್ರಾಣೇಶ ಗುರುಗಳಿಗೆ ಅವುಗಳನ್ನು ತೋರಿಸಿದಾಗ, ಬಹಳ ಸಂತಸಗೊಂಡ ಅವರು ‘‘ತುಂಬಾನೇ ಚೆನ್ನಾಗಿ ಸಂಗ್ರಹ ಮಾಡಿದ್ದೀರಿ, ಇವುಗಳಿಗೆ ಒಂದು ಪುಸ್ತಕ ರೂಪ ಕೊಡಬಹುದಲ್ಲಾ’’ ಎಂದು ಹೇಳಿದ ಮಾತಿನ ವಿಚಾರದ ಫಲವೇ ಈ ‘ಪ್ರಾಣೇಶ್ ಪಂಚ್ ಪಕ್ವಾನ್ನ’ ಕಿರುಹೊತ್ತಿಗೆ.

ಬೀಚೀ ಪ್ರಾಣೇಶರ ಬರಹಗಳಿಂದಾರಿಸಿದ ಈ ನುಡಿ-ಮುತ್ತುಗಳ ಹೊತ್ತಿಗೆಯಲ್ಲಿ, ವೈಚಾರಿಕತೆಗೆ ಸಾಣೆ ಹಿಡಿಯುವ ತೀಕ್ಷ್ಣ ಮಾತುಗಳಿವೆ, ನಗೆಯ ಹೊನಲನ್ನು ಚಟ್ಟನೇ ಚಿಮ್ಮಿಸುವ ಚಾಟೋಕ್ತಿ, ವ್ಯಂಗ್ಯೋಕ್ತಿಗಳಿವೆ. ಹೊಸ ವಿಚಾರಧಾರೆಯತ್ತ ಕರೆದೊಯ್ಯುವ ನುಡಿದೀಪಗಳಿವೆ. ನೋವಿನನುಭವದಿ ಕರುಳ ಕರಗಿಸುವ, ಮನ ಮೆಚ್ಚಿ ಅಹುದಹುದೆನ್ನುವ ಅನುಭವಾಮೃತ ವಾಣಿಗಳಿವೆ, ಜೀವನದ ಯಾನದಲ್ಲಿ ಹತಾಶೆ, ವಿಷಾಧಗಳನು ಅನುಭವಿಸಿದಾಗ ಅದಕ್ಕೊಂದು ಹೊಸ ನುಡಿಗಟ್ಟನ್ನು ನೀಡುವ ನವಿನೋಕ್ತಿಗಳಿವೆ, ಕಿರು ಮಾತುಗಳಲ್ಲಿ ಪಿರಿದರ್ಥವನು ಹೊಮ್ಮಿಸುವ ನವಿರೋಕ್ತಿಗಳಿವೆ, ಹೊಸನಗೆಯ ಪಂಚ್‌ಗಳಿವೆ.

ಈಗಾಗಲೇ ಅನೇಕ ಕೃತಿಗಳ ಮೂಲಕ ಕನ್ನಡದ ಪ್ರಮುಖ ಬರಹಗಾರರ ಸಾಲಿನಲ್ಲಿ ಗೌರವದ ಸ್ಥಾನ ಪಡೆದಿರುವ ಬೀಚೀ ಪ್ರಾಣೇಶ ಗುರುಗಳಿಗೆ ಈ ಕೃತಿಯನ್ನು ನುಡಿತೋರಣಗಳ ಮೂಲಕ ಅಭಿಮಾನ ಮತ್ತು ಸಂಪ್ರೀತಿ ತುಂಬಿದ ಗೌರವಗಳೊಂದಿಗೆ ಅರ್ಪಿಸುವ ಆಕಾಂಕ್ಷೆ ನನ್ನದು.

ಬೆಳಗಾವಿ ಜಿಲ್ಲೆ ಸವದತ್ತಿಯವರು
1999ರ KES ಬ್ಯಾಚ್ ಶಿಕ್ಷಣ ಅಧಿಕಾರಿಯಾದ ರವಿಯವರು ಪ್ರಸ್ತುತ ಸರಕಾರಿ ಶಿಕ್ಷಕರ ಶಿಕ್ಷಣ ಕಾಲೇಜು, ಬೆಳಗಾವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗ ನಟ-ನಿರ್ದೇಶಕರಾಗಿ ನಗೆಹನಿ-ಅಣಕುಹಾಡುಗಳ ರಚನೆಕಾರರಾಗಿ, ಹರಟೆ ಮಲ್ಲರಾಗಿ ಮತ್ತು ನಗೆ-ಮಾತುಗಾರರಾಗಿ ಅಪಾರ ಜನಪ್ರಿಯತೆ ಪಡೆದ ನಗೆ-ಸಾರ್ವಭೌಮರಾಗಿದ್ದಾರೆ.
ನಗೆ ಸರದಾರ, ಮಾತಿನ ಮೋಡಿಗಾರ, ಹಾಸ್ಯಭಾಸ್ಕರ ಮುಂತಾದ ಬಿರುದಾಂಕಿತರಾದ ಭಜಂತ್ರಿಯವರು ಬಿchi ಪ್ರಾಣೇಶ್‌ರವರ ಶಿಷ್ಯೋತ್ತಮರು. ಇವರು ಕನ್ನಡ ನಾಡಲ್ಲದೇ ಗೋವಾ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಕನ್ನಡದ ಎಲ್ಲ ಮುಖ್ಯ ವಾಹಿನಿಗಳಲ್ಲಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ದುಬೈ, ಅಬುದಾಬಿ, ಕತಾರ್, ಇಂಡೋನೇಷಿಯಾ ಸೇರಿದಂತೆ ಅನೇಕ ರಾಷ್ಟ್ರಗಳ ಕನ್ನಡ ಸಂಘಗಳಲ್ಲೂ ನಗೆ ಕಾರ್ಯಕ್ರಮ ನೀಡಿ ತನ್ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಪಡೆದ ಭಾಗ್ಯಶಾಲಿಗಳಾಗಿದ್ದಾರೆ.

Best Sellers
Junior Encyclopedia Awesome Facts About The Human Body
John Murrey
Rs. 113/-   Rs. 125
ಖುಷ್ವಂತ್ ನಾಮಾ (ನನ್ನ ಬದುಕಿನ ಪಾಠಗಳು)
ಖುಷ್ವಂತ್ ಸಿಂಗ್, Khushwant Singh
Rs. 117/-   Rs. 130
ಮೂರು ತಲೆಮಾರು
ಶಾಮರಾಯ ತ ಸು, Shamaraya T S
Rs. 135/-   Rs. 150
ಉಡುಗೊರೆ (Hard Cover)
ರವಿ ಬೆಳಗೆರೆ, Ravi Belagere
Rs. 238/-   Rs. 250

Latest Books
ಅಮೇಜಾನ್ ನಲ್ಲಿ ಅಜ್ಞಾತ (ಕಾದಂಬರಿ)
ಚಂದ್ರಶೇಖರ ಬೇದೂರು ಬಿ ಆರ್, Chandrashekar Beduru B R
Rs. 126/-   Rs. 140
ಕೀರ್ತನ ಸುಧಾ (ಸಮಗ್ರ ಕೀರ್ತನೆಗಳ ಸಂಗ್ರಹ)
ಸುಧಾ ಪಾಂಡುರಂಗರಾವ್, Sadhu Pandurangarao
Rs. 356/-   Rs. 395
ಇತಿಹಾಸ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಕೋಶ
ಎಂ. ಆರ್ ಎಲ್, MRL
Rs. 380/-   Rs. 400
ಮಹಿಳೆಯ ಮನೋಲೋಕ
ಸಂಪಾ : ಡಾ. ವಸುಂಧರಾ ಭೂಪತಿ, Vasundhara Bhupati
Rs. 86/-   Rs. 95


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.