|
|

| Rs. 110 | 10% |
Rs. 99/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕ್ವಿಜ್ ಸ್ಪರ್ಧೆಗಳ ಪರಿಚಯ ಯಾರಿಗಿಲ್ಲ ಹೇಳಿ ? ಕೌನ್ ಬನೇಗಾ ಕರೋಡ್ಪತಿ ಸ್ಪರ್ಧೆಯಿಂದ ಹಿಡಿದು ಸ್ಥಳೀಯ ಮಟ್ಟದ ಕ್ವಿಜ್ ಸ್ಪರ್ಧೆಗಳ ಕಿರು ಪರಿಚಯದ ಜೊತೆಗೆ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಬೇಕಾದ ಅಗತ್ಯ ಮಾಹಿತಿ ಸಾಹಿತ್ಯ ಕುರಿತು ಸರಳವಾದ ಸುದೀರ್ಘ ವಿವರಣೆ ಇಲ್ಲಿದೆ. ವಿದ್ಯಾರ್ಥಿಗಳ/ಸ್ಪರ್ಧಾರ್ಥಿಗಳ ಅಚ್ಚು ಮೆಚ್ಚಿನ ಕೈಪಿಡಿ ಇದು ಎಂಬುದರಲ್ಲಿ ಎರಡು ಮಾತಿಲ್ಲ. ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿ, ಆಸಕ್ತ ನಾಗರಿಕರಲ್ಲಿ ಪ್ರಪಂಚದ ಆಗುಹೋಗುಗಳ ಬಗ್ಗೆ ಕುತೂಹಲ ಕೆರಳಿಸುವುದು, ಅವರ ಬೌದ್ಧಿಕ ಸಂಪತ್ತನ್ನು ಹೆಚ್ಚಿಸುವುದು, ಪರೀಕ್ಷೆಗಳಲ್ಲಿ ಚೆನ್ನಾಗಿ ಉತ್ತರಿಸಲು ಉತ್ತೇಜಿಸುವುದು, ಜ್ಞಾಪಕಶಕ್ತಿಯನ್ನು ಒರೆಗೆ ಹಚ್ಚುವುದು, ಸಮಸ್ಯೆಗಳನ್ನು ಬಿಡಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಸೂಕ್ಷ್ಮಗ್ರಾಹಿ ಶಕ್ತಿಯನ್ನು ವೃದ್ಧಿಸುವುದು ಮತ್ತು ತರಬೇತಿ ನೀಡುವುದು, ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುವುದು, ಸದೃಢ ದೇಹದಲ್ಲಿ ಸಬಲ ಮನಸ್ಸು ಮತ್ತು ಜಾಗೃತ ಬುದ್ಧಿ ಬೆಳೆಸುವುದು ಕ್ವಿಜ್ನ ಮುಖ್ಯ ಉದ್ದೇಶ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲೆಡೆಯೂ ಹೊಸ ಸವಾಲುಗಳು. ಶಿಕ್ಷಕರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು, ಜನಸಾಮಾನ್ಯರು ವಿವಿಧ ಉದ್ದೇಶಗಳಿಗಾಗಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸುವುದು ಅನಿವಾರ್ಯವಾಗುತ್ತಿದೆ. ಅವರಿಗೆ ನೆಟ್ ಬಳಕೆಯ ವಿಧಿವಿಧಾನಗಳ ಪರಿಚಯ ಮಾಡಿಕೊಡುವುದರ ಜೊತೆಗೆ ಅಂತಾರಾಷ್ಟ್ರೀಯ ಸಂಪರ್ಕ ಸಾಧಿಸಿ ಲಾಭಗಳಿಸುವ ಹೊಸ ಹಾದಿಯ ಅನ್ವೇಷಣೆಗೆ ಮಾರ್ಗದರ್ಶನ ಮಾಡಿಕೊಡುವ ಉದ್ದೇಶದಿಂದ ಸಂಕಲಿಸಲಾಗಿರುವ ಅತ್ಯುಪಯುಕ್ತ ವೆಬ್ಸೈಟ್, ಸಿ.ಡಿ.ಮತ್ತು ಡಿಜಿಟಲ್ ಪುಸ್ತಕಗಳು ಕೃತಿ ಕ್ವಿಜ್ - ಸ್ಪರ್ಧಾಲೋಕಕ್ಕೊಂದು ಬೆಳಕಿಂಡಿ ಕೃತಿಗೆ ಪೂರಕ ಮಾಹಿತಿ ಒದಗಿಸುತ್ತದೆ. ಇದು ನಿಮ್ಮ ಸಂಗ್ರಹದಲ್ಲಿ ಇದ್ದರೆ ನಿಮ್ಮ ಕಲಿಕೆಗೆ ನೂರ್ಮಡಿ ಬಲ ಬರುತ್ತದೆ.
|
| |
|
|
|
|
|
|
|
|
|