|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಠಾಕೂರರು ಲೋಕದಲ್ಲಿ ಭಾರತದ ಕೀರ್ತಿಧ್ವಜವನ್ನು ಎತ್ತಿಹಿಡಿದವರು; ಗೌರವಗಳಿಸಿ ಕೊಟ್ಟವರು. ನಮ್ಮ ಪ್ರಾಚೀನ ಋಷಿಪರಂಪರೆಗೆ ಸೇರಿದ ಅವರು ಭಾರತದ ಎಲ್ಲ ಆದರ್ಶಗಳ ಮತ್ತು ಜೀವನದ ನಿಜಮೌಲ್ಯಗಳ ಸಂಕೇತವಾಗಿದ್ದಾರೆ.
ಮಹಾತ್ಮ ಗಾಂಧೀಜಿಯವರು ರಾಷ್ಟ್ರದ ರಾಜಕೀಯ ಜೀವನವನ್ನು ಜಾಗೃತಗೊಳಿಸಿದ ನಾಯಕರಾದರೆ, ಗುರುದೇವ ಠಾಕೂರರು ಸಾಂಸ್ಕೃತಿಕ ಜೀವನವನ್ನು ರೂಢಿಸಿದ ಶಿಲ್ಪಿಯಾಗಿದ್ದಾರೆ. ಈ ಪೂಜ್ಯ ಮಹನೀಯರಿಬ್ಬರ ಪರಸ್ಪರ ಪೂರಕವಾದ ಕಾರ್ಯಸಾಧನೆಗಳಿಂದಲೇ ಜಗತ್ತಿನ ಸ್ವತಂತ್ರಭಾರತ ಇಂದಿನ ಗೌರವಕ್ಕೆ ಪಾತ್ರವಾಗಿರುವುದು ಮತ್ತು ಅದರ ರಾಷ್ಟ್ರ ಜೀವನ ಹಸನಾಗಿರುವುದು.
ಈ ಪುಸ್ತಕದಲ್ಲಿ ಲೇಖಕರು ಠಾಕೂರರ ಜೀವನದ ಸ್ಥೂಲ ಪರಿಚಯ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಠಾಕೂರರಂಥ ಜೀವನವನ್ನು ಕುರಿತು ಬರೆಯುವುದು ಸುಲಭವಲ್ಲ. ಬಹುಮುಖ ಪ್ರತಿಭೆಯ ಅವರ ಜೀವನವು ಚರಿತ್ರೆಯ ಚೌಕಟ್ಟಿಗೆ ಸಿಲುಕುವುದಿಲ್ಲ. ಕವಿಯ ಕಾವ್ಯವೇ ಅವನ ಜೀವನ; ಆದರೆ ಠಾಕೂರರ ಜೀವನವೇ ಕಾವ್ಯವಾಗಿದೆ. ಆದುದರಿಂದಲೇ ಅವರು ತಮ್ಮ ಒಂದು ಕವಿತೆಯಲ್ಲಿ ಹೇಳಿದ್ದಾರೆ: ‘ಕವಿಯನ್ನು ನೀನು ಅವನ ಜೀವನ ಚರಿತ್ರೆಯಲ್ಲಿ ಕಾಣಲಾರೆ.’
|
| |
|
|
|
|
|
|
|
|
|