|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರಾಜಕೀಯ ಅರ್ಥಶಾಸ್ತ್ರ ಎಂದರೆ ಏನು? ಜನರ ನಡುವೆ ಆರ್ಥಿಕ ಸಂಬಂಧಗಳು ಯಾವುದೇ ಏರುಪೇರಿಲ್ಲದೆ ನಡೆದರೆ ಬದುಕು ನೆಮ್ಮದಿಯಿಂದ ಸಾಗುತ್ತದೆ. ಆದರೆ ಬಂಡವಾಳಶಾಹಿ ಆರ್ಥಿಕತೆ ಅಡಿಯಿಟ್ಟ ಕಾಲದಿಂದಲೇ ಅನೇಕ ಬದಲಾವಣೆಗಳು ತಲೆದೋರಿದವು. ನಾವು ಎದುರಿಸುತ್ತಿರುವ ಎಲ್ಲ ಬಿಕ್ಕಟ್ಟುಗಳು ಬಂಡವಾಳಶಾಹಿಯ ಉತ್ಪನ್ನಗಳು. ನಮ್ಮ ಸಮಾಜದಲ್ಲಿ ನಿರುದ್ಯೋಗವು ಬೃಹತ್ ರೂಪವನ್ನು ತಾಳುತ್ತಿದೆ. ಬೆಲೆಗಳು ಏರುತ್ತಿವೆ. ಒಬ್ಬ ವ್ಯಕ್ತಿ ಅಲ್ಪ ಸಮಯದಲ್ಲಿ ಶ್ರಮಪಡದೆ ಕೋಟ್ಯಧಿಪತಿಯಾಗುತ್ತಾನೆ. ಹಾಗೆಯೇ ಇನ್ನೊಬ್ಬ ಭಿಕಾರಿಯಾಗುತ್ತಾನೆ. ಈ ಬೆಳವಣಿಗೆಗಳು ಸ್ವಾಭಾವಿಕವಾದುವಲ್ಲ. ಅನಿವಾರ್ಯವೂ ಅಲ್ಲ. ಈ ಅರಾಜ ಆರ್ಥಿಕ ವ್ಯವಸ್ಥೆ ನಮ್ಮನ್ನು ಮೀರಿ ಬೆಳೆದುಬಿಟ್ಟಿದೆ. ಆದುದರಿಂದ ನಾವು ನಮ್ಮ ಜೀವನದ ಆರ್ಥಿಕ ಸಂಬಂಧಗಳನ್ನು ಸೂಕ್ಷ್ಮವಾಗಿ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. "ವಿಜ್ಞಾನಗಳ ವಿಜ್ಞಾನವೆಂದರೆ ಈ ರಾಜಕೀಯ ಅರ್ಥಶಾಸ್ತ್ರ" ಹೀಗೆ ಹೇಳುತ್ತಾರೆ ಕ್ರಾಂತಿಕಾರಿ ಸಿದ್ಧಾಂತಿ, ತತ್ವಶಾಸ್ತ್ರಜ್ಞೆ ಹಾಗೂ ರಾಜಕೀಯ ಕಾರ್ಯಕರ್ತೆ ರೋಸಾ ಲಕ್ಸಂಬರ್ಗ್.
|
ಬ್ಯಾಂಕ್ ನೌಕರ ಚಳವಳಿಯ ಸಕ್ರಿಯ ಕಾರ್ಯಕರ್ತ ರಾಗಿರುವ ಶ್ರೀ ಮ. ಶ್ರೀ. ಮುರಳಿ ಕೃಷ್ಣ ಪತ್ರಿಕೆ, ನಿಯತಕಾಲಿಕೆ ಗಳಿಗೆ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ. ಪ್ರಕಟಿತ ಬರೆಹಗಳನ್ನೊಳಗೊಂಡ "ಸ್ಪಂದನ" ಇವರ ಪ್ರಥಮ ಪುಸ್ತಕ. ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯರ "ತತ್ತ್ವಶಾಸ್ತ್ರ ಮತ್ತು ಮಾನವ ಜನಾಂಗದ ಭವಿಷ್ಯ" ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾಹಿತ್ಯ, ಸಂಗೀತ, ಸಿನಿಮಾ, ಚಾರಣ ಇತ್ಯಾದಿ ಅವರ ಆಸಕ್ತಿಯ ಕ್ಷೇತ್ರಗಳಾಗಿವೆ.
|
|
| |
|
|
|
|
|
|
|
|
|