|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಸಾಧಕನ ಹೆಜ್ಜೆಗಳು’ ಸರ್ ಎಂ. ವಿಶ್ವೇಶ್ವರಯ್ಯನವರ ತಂತ್ರಜ್ಞಾನ, ಆಡಳಿತ ದಕ್ಷತೆ, ದೂರದರ್ಶಿತ್ವವನ್ನು ಕೇಂದ್ರವಾಗಿರಿಸಿಕೊಂಡು ಅವರ ಬದುಕಿನ ಒಳನೋಟಗಳನ್ನು ಹಿಡಿದಿಟ್ಟಿರುವ ಕೃತಿ. ಈ ಮಹಾಮೇಧಾವಿಯನ್ನು ಕುರಿತು ಕನ್ನಡದಲ್ಲಿ ಅನೇಕ ಕೃತಿಗಳು ಹೊರಬಂದಿವೆ ನಿಜ. ಸಾಧಕನ ಹೆಜ್ಜೆಗಳು ಕೃತಿಯಲ್ಲಿ ಈ ಮೇರು ಪುರುಷನ ಬದುಕನ್ನು ಮತ್ತೊಂದು ಕೋನದಲ್ಲಿ ನೋಡಲಾಗಿದೆ. ಅವರ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಂದರ್ಭ ಬಂದಾಗಲೆಲ್ಲ ಈ ಚತುರಮತಿ ಅದನ್ನು ಗೆದ್ದ ಬಗೆ ಹೇಗೆಂಬುದನ್ನು ಕೃತಿಯುದ್ದಕ್ಕೂ ಸರಳವಾಗಿ ತೆರೆದಿಡಲಾಗಿದೆ. ಈ ಅನನುಕರಣೀಯನ ಹೆಜ್ಜೆಗಳನ್ನರಿಸಿ ಹೊರಟವರಿಗೆ ಇಲ್ಲಿದೆ ಸಂತತ ಪ್ರೇರಣೆ. ಸರ್. ಎಂ. ವಿ. ಕುರಿತ ಚಿಂತನೆ ಎಂದು ಬತ್ತದ ಚಿಲುಮೆ.
|
ಟಿ ಆರ್ ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ನವಕರ್ನಾಟಕದ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರು. ಕರ್ನಾಟಕ ಸರ್ಕಾರದ ‘ವಿಶನ್ ಗ್ರೂಪ್’ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
|
|
| |
|
|
|
|
|
|
|
|
|