|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೭೨ರಲ್ಲಿ ತಮ್ಮ ಶೂನ್ಯ ಸಂಪಾದನೆಯ ಪರಾಮರ್ಶೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಗಳಿಸಿದ ಸಂ. ಶಿ. ಭೂಸನೂರಮಠ ಅವರು ವಚನ ಸಾಹಿತ್ಯ, ವೀರಶೈವ ಸಾಹಿತ್ಯಗಳ ಅಧ್ಯಯನ ಮತ್ತು ಸಂಶೋಧನೆಯ ವಿಷಯದಲ್ಲಿ ಹೊಸ ಜಲಚಿಹ್ನೆಯನ್ನೇ ಸೃಷ್ಟಿಸಿದಂಥವರು. ಅವರ ಭವ್ಯಮಾನವ ಮಹಾಕಾವ್ಯ ಆಧುನಿಕ ಕನ್ನಡ ಮಹಾಕಾವ್ಯಗಳ ಶ್ರೇಣಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು, ಭೂಸನೂರಮಠ ಅವರ ಸೃಜನಶೀಲ ಪ್ರತಿಭೆಯ ಉತ್ಕೃಷ್ಟ ನಿದರ್ಶನವೇ ಆಗಿದೆ. ಹಲವಾರು ಪ್ರಶಸ್ತಿ - ಪುರಸ್ಕಾರಗಳನ್ನು ಗಳಿಸಿದ್ದ ಅವರು ಗಳಿಸಿದ ಜನಪ್ರೀತಿ, ತರುಣ ಪೀಳಿಗೆಯನ್ನು ಪ್ರೋತ್ಸಾಹಿಸುತ್ತಿದ್ದ ರೀತಿ ಅಪೂರ್ವವೇ ಆಗಿತ್ತು.
|
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ|| ಶಾಂತಾ ಇಮ್ರಾಪುರ ಅವರು ಕರ್ನಾಟಕದ ಲೇಖಕಿಯರ ಪಂಕ್ತಿಯಲ್ಲಿ ತಮ್ಮ ಸಂಶೋಧನ ಪ್ರವೃತ್ತಿ, ಅಧ್ಯಯನಶೀಲತೆ, ಸಂಪಾದನ ಶ್ರದ್ಧೆ ಮತ್ತು ವಿಮರ್ಶನ ಪ್ರಜ್ಞೆಗಳಿಗೆ ಹೆಸರಾಗಿರುವಂಥವರು. ಇವುಗಳ ಪ್ರತೀಕವಾಗಿರುವಂಥ ಹಲವಾರು ಗ್ರಂಥಗಳನ್ನು ರಚಿಸಿ, ಪ್ರಶಸ್ತಿ - ಪುರಸ್ಕಾರಗಳನ್ನು ಗಳಿಸಿರುವಂಥವರು. ಸಂ. ಶಿ. ಭೂಸನೂರಮಠ ಅವರ ಆತ್ಮೀಯರೂ, ನಿಕಟವರ್ತಿಗಳೂ ಆಗಿದ್ದ ಡಾ|| ಶಾಂತಾ ಅವರು ಭೂಸನೂರಮಠ ಅವರ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದು, ಅವರ ಸಾಹಿತ್ಯಿಕ ಸಾಧನೆಯನ್ನು, ವಚನ ಸಾಹಿತ್ಯದ ಅಧ್ಯಯನದ ಕ್ಷೇತ್ರಕ್ಕೆ ಅವರು ನೀಡಿರುವ ಮಹತ್ವದ ಕೊಡುಗೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
|
|
| |
|
|
|
|
|
|
|
|