|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಸಂಶೋಧನ ಲೇಖನಗಳು‘ ಎಂಬ ಈ ಬೃಹತ್ ಸಂಪುಟದಲ್ಲಿ ಒಟ್ಟು ೧೧೫ ಕನ್ನಡ ಲೇಖನಗಳಿವೆ. ಇವನ್ನು ಇತಿಹಾಸ, ಸಂಸ್ಕೃತಿ, ಕಲೆ-ವಾಸ್ತುಶಿಲ್ಪ, ಸಾಹಿತ್ಯ, ವಿಮರ್ಶೆಗಳು ಮುನ್ನುಡಿಗಳು - ಎಂಬ ಐದು ಭಾಗಗಲಲ್ಲಿ ಅಳವಡಿಸಲಾಗಿದೆ. ಶ್ರೀಯುತರ ಎಲ್ಲ ಲೇಖನಗಳೂ ಇಲ್ಲಿ ಸೇರಿವೆ ಎಂದು ಹೇಳುವಂತಿಲ್ಲ. ಕೆಲವು ಬಿಟ್ಟು ಹೋಗಿವೆ. ಮೊದಲು ಅಚ್ಚಾಗಿದ್ದ ಮೂಲಗಳಿಂದ ಅವನ್ನು ಸುಲಭವಾಗಿ ಸಂಗ್ರಹಿಸಲು ಸಿಕ್ಕದೇ ಹೋದುದು ಈ ಕೊರತೆಗೆ ಮುಖ್ಯ ಕಾರಣ. ಇಂಥವನ್ನೆಲ್ಲ ಸೇರಿಸಿದರೆ ಇನ್ನೂ ಒಂದು ಸಂಕಲನವಾಗಬಹುದೆಂದು ತೋರುತ್ತದೆ.
ಇಲ್ಲಿ ಸಮಾವೇಶವಾಗಿರುವ ಲೇಖನಗಳು ಬಹುಮಟ್ಟಿಗೆ ಬೇರೆ ಬೇರೆ ವಿದ್ವತ್ಪತ್ರಿಕೆಗಳು, ದಿನಪತ್ರಿಕೆಗಳು, ಅಭಿನಂದನ ಮತ್ತು ಸಂಸ್ಮರಣ ಗ್ರಂಥಗಳಲ್ಲಿ ಈ ಮೊದಲು ಪ್ರಕಟಗೊಂಡಿವೆ. ಈಚಿನ ಕೆಲವು ವರ್ಷಗಳಲ್ಲಿ ‘ಪ್ರಜಾವಾಣಿ‘ ದಿನಪತ್ರಿಕೆ ಶಾಸ್ತ್ರಿಗಳ ಕನ್ನಡ ಬರೆಹದ ಕಾಯಕಕ್ಕೆ ಬಹುವಾಗಿ ಇಂಬುಕೊಟ್ಟಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಈ ಸಂಕಲನದ ಎಲ್ಲ ಲೇಕನಗಳಲ್ಲಿಯೂ ಲೇಖಕರ ಅಭಿರುಚಿ, ಪರಿಶ್ರಮಗಳು ಒಂದೇ ಬಗೆಯಾಗಿ ಪ್ರಕಟವಾಗಿವೆಯೆಂದು ಹೇಳುವಂತಿಲ್ಲ. ಆದರೆ ಹಿಡಿದ ವಿಷಯದಲ್ಲಿ ತಾದಾತ್ಮ್ಯವನ್ನು ಸಾಧಿಸಿ ಸಮಸ್ಯೆಗಳ ಆಳ-ಅಗಲಗಲನ್ನು ಶೋಧಿಸಲು ಸಮರ್ಥವಾದ ಬೌದ್ಧಿಕಸಾಹಸ ಶಾಸ್ತ್ರಿಗಳಲ್ಲಿ ಅಪಾರವಾಗಿ ಉಂಟು ಎನ್ನುವುದನ್ನು ಇಲ್ಲಿಯ ಲೇಖನಗಳು ಯಾರಿಗಾದರೂ ಮನವರಿಕೆ ಮಾಡಿಕೊಡುತ್ತವೆ.
|
| |
|
|
|
|
|
|
|
|
|