|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಲೋಕ ಬದುಕಿನಲ್ಲಿ ಗೋಚರಿಸಿದ ಚಿಕ್ಕ ಎಳೆಯೊಂದನ್ನು ಆಯ್ದುಕೊಂಡು, ಅದರ ಸುತ್ತ ಬಲೆ ಹೆಣೆಯುವ ಜೇಡನಂತೆ ಅಥವಾ ಗೂಡುಕಟ್ಟುವ ರೇಷ್ಮೇಹುಳುವಿನಂತೆ ಚಿಂತನೆಯನ್ನು ಕಟ್ಟಲು ಇಲ್ಲಿ ಯತ್ನಿಸಿದೆ. ಹೀಗೆ ರೂಪುಗೊಂಡಿರುವ ಚಿಂತನೆಗಳಲ್ಲಿ ನೆನಪುಗಳಿವೆ, ವ್ಯಕ್ತಿಚಿತ್ರಗಳಿವೆ, ಶ್ರದ್ಧಾಂಜಲಿಗಳಿವೆ, ಪುಸ್ತಕ ವಿಮರ್ಶೆಗಳಿವೆ, ತಿರುಗಾಟದ ಅನುಭವಗಳಿವೆ, ವರದಿಗಳೂ ಇವೆ. ಎಲ್ಲವೂ ಲಹರಿ ರೂಪದಲ್ಲಿವೆ. ಲಹರಿಯ ಮುಖ್ಯ ಗುಣ ಅಲೆದಾಟ. ನಿರ್ದಿಷ್ಟ ಗುರಿಯಿಟ್ಟುಕೊಂಡು ಆಳಕ್ಕೆ ಇಳಿಯುವುದಲ್ಲ. ನೆಲವೇ ಕಾಣದಷ್ಟು ಎತ್ತರಕ್ಕೇರುವುದೂ ಅಲ್ಲ. ಬದಲಿಗೆ, ಆಪ್ತರಾದ ಸಖಸಖಿಯರು ಅಕ್ಕಪಕ್ಕ ಕುಳಿತು ವಿಚಾರ ಮೊಳೆಯುವಂತೆ ಸಣ್ಣಗೆ ಮಾತಾಡಿಕೊಳ್ಳುವುದು; ಉಗ್ರವಾಗಿ ತರ್ಕಬದ್ಧವಾಗಿ ಪ್ರತಿಪಾದಿಸಿ ವಿಚಾರವೊಂದನ್ನು ಮಂಡಿಸುವುದಲ್ಲ; ಬದಲಿಗೆ ಸಂವಾದಕ್ಕೆ ಪ್ರೇರೇಪಿಸಬಲ್ಲ ಅಂಶವೊಂದನ್ನು ಮುಂದಿಟ್ಟು ಸಮ್ಮತಿ ಮತ್ತು ಭಿನ್ನಮತಕ್ಕೆ ಕಾಯುವುದು. ಹಿತವಾಗಿ ಕೆಣಕುವುದು, ತಕ್ಷಣ ಹೊಳೆದಿದ್ದನ್ನು ಹಂಚಿಕೊಳ್ಳುತ್ತಲೇ, ಸದ್ಯವಲ್ಲದ ದಿಟದತ್ತ ಕೊರಳು ಹೊರಳಿಸುವುದು.
|
ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|