|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಲ್ಲಭಬಾಯ್ ಪಟೇಲ್ ಅವರನ್ನು ‘ಸರ್ದಾರ್‘, ‘ಉಕ್ಕಿನ ಮನುಷ್ಯ‘ ಎಂದು ಕರೆದರು. ‘ಭಾರತದ ಬಿಸ್ಮಾರ್ಕ್‘ ಎಂದು ಪ್ರಶಂಸಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಘ ಬ್ರಿಟಿಷ್ ಭಾರತದ ಜೊತೆಯಲ್ಲಿ 565 ಚಿಕ್ಕಪುಟ್ಟ ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳು ಭಾರತದ ಜೊತೆ, ಪಾಕಿಸ್ತಾನದ ಜೊತೆಯಲ್ಲಿ ಸೇರಬಹುದಿತ್ತು ಅಥವಾ ಸ್ವತಂತ್ರವಾಗಿ ಉಳಿಯಬಹುದಿತ್ತು. ಗಾಂಧೀಜಿಯವರಿಗೆ ಈ ಎಲ್ಲ ಸಂಸ್ಥಾನಗಳನ್ನು ಭಾರತದೊಡನೆ ಸೇರುವಂತೆ ಹಿತನುಡಿಯನ್ನು ಹೇಳುವ ಸಾಮರ್ಥ್ಯ ಕೇವಲ ಪಟೇಲರಿಗಿದೆ ಎಂದೆನಿಸಿತು. ಪಟೇಲರು ಸಾಮ, ದಾನ, ಭೇದ ದಂಡಗಳನ್ನು ಸಮಯೋಚಿತವಾಗಿ ಬಳಸಿ ಎಲ್ಲರೂ ಭಾರತ ಒಕ್ಕೂಟದಲ್ಲಿ ವಿಲೀನವಾಗುವಂತೆ ನೋಡಿಕೊಂಡದ್ದು ಅದ್ವಿತೀಯ ಸಾಧನೆ. ಭಾರತ ವಿಭಜನೆಗೊಂಡಾಗ ಪಂಜಾಬ್, ದಿಲ್ಲಿ ಮುಂತಾದ ಸ್ಥಳಗಳಲ್ಲಿ ನಡೆದ ಹಿಂಸೆ ಅವರ್ಣನೀಯ. ಪಟೇಲರು ಗೃಹಮಂತ್ರಿಗಳಾಗಿ ಈ ಸಮಸ್ಯೆಯನ್ನು ಹತೋಟಿಗೆ ತಂದರು. ಭಾರತದಲ್ಲಿ ಐಎಎಸ್, ಐಪಿಎಸ್ ಮುಂತಾದ ರಾಷ್ಟ್ರೀಯ ಸೇವಾ ವ್ಯವಸ್ಥೆಗಳನ್ನು ಜಾರಿಗೆ ತಂದರು. ಈಗ ಮೊದಲ ಬಾರಿಗೆ ಅವರ ಹೆಸರಿನಲ್ಲಿ ಒಂದು ಉಕ್ಕಿನ ಪ್ರತಿಮೆ ಗುಜರಾತಿನಲ್ಲಿ ನಿರ್ಮಾಣವಾಗುತ್ತಿದೆ.
|
ಶ್ರೀ ವೈ ಜಿ ಮುರಳೀಧರನ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು, ನಾಗರಿಕ ಹಕ್ಕು ಇತ್ಯಾದಿ ವಿಷಯಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವುದಲ್ಲದೆ ನಾಗರಿಕರನ್ನು ಸಂಘಟಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಸುಮಾರು 3000 ಲೇಖನಗಳನ್ನೂ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದಿಂದಲೇ ಅವರ ಸುಮಾರು 25 ಪುಸ್ತಕಗಳು ಪ್ರಕಟವಾಗಿವೆ. ಶ್ರೀ ಮುರಳೀಧರನ್ ಅವರ ‘ಏನಿದು ಲೋಕ್ಪಾಲ್?’, ‘ಮಾಹಿತಿ ಹಕ್ಕು’ ಮುಂತಾದ ಕೃತಿಗಳು ಅನೇಕ ಮುದ್ರಣ ಕಂಡಿವೆ.
|
|
| |
|
|
|
|
|
|
|
|
|