Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ
ಲೇಖಕರು: ಶೆಟ್ಟರ್ ಷ, Shettar S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 320
ಪುಸ್ತಕದ ಗಾತ್ರ : 1/8 Demy Size
ISBN : 9788191010053
ಕೋಡ್ : 110163

ಡಾ. ಶೆಟ್ಟರ್ ದಕ್ಷಿಣ ಭಾರತದ ಧೀಮಂತ ಚಿಂತಕರಾದ ಇತಿಹಾಸಜ್ಞರು. ಈ ಪುಸ್ತಕದಲ್ಲಿ ಕನ್ನಡವನ್ನು ದ್ರಾವಿಡಲೋಕದಲ್ಲೂ, ಸಂಸ್ಕೃತ ಲೋಕದಲ್ಲೂ ಇಟ್ಟು ಅವರು ನೋಡುವ ಕ್ರಮ ಘನವಾದ ಹೊಸ ಪರಿಕಲ್ಪನೆಗೆ ಎಡೆಮಾಡಿಕೊಟ್ಟಿದೆ. ದೇಸಿಗೆ ಹೆಚ್ಚು ಒಲಿದು, ಮಾರ್ಗವನ್ನು ರೂಢಿಸಿಕೊಂಡು ಮಾರ್ಗಕ್ಕೆ ಹೆಚ್ಚು ಒಲಿದು ದೇಸಿಯನ್ನು ಒಳಗೊಂಡು ಹುಟ್ಟುತ್ತಿರುವ ವಿಫುಲವಾದ ಕನ್ನಡ ಸಾಹಿತ್ಯದಲ್ಲಿ ಪಂಪ, ವಚನಕಾರರು, ಕುವೆಂಪು, ಬೇಂದ್ರೆ, ಅಡಿಗ, ಪುತಿನ, ಕಂಬಾರ ಇತ್ಯಾದಿ ಹಲವರನ್ನು ನಾವು ವಿಮರ್ಶಿಸುವ ದಾರಿಗಳನ್ನು ಶೆಟ್ಟರ್ ವಿಚಾರದಿಂದ ಇನ್ನಷ್ಟು ದಟ್ಟವಾಗಲಿವೆ.

ಕೆ.ವಿ. ಸುಬ್ಬಣ್ಣ ಮಾತು ಶೆಲ್ಡನ್ ಪೋಲಕರು ಮಾಡಿರುವ ಚಿಂತನೆಗೆ ಇನ್ನಷ್ಟು ಹೊಳಹುಗಳನ್ನು, ಹೊಸ ಓದುಗಳನ್ನೂ ಕೊಡುವ ಈ ಪುಸ್ತಕ ನಮ್ಮ ಕಾಲದ ಆಚಾರ್ಯ ಕೃತಿಯಾಗಿದೆ.

ಪ್ರೊ. ಷ. ಶೆಟ್ಟರ್ ಅವರು ಜನಿಸಿದ್ದು ೧೯೩೫ ನೇ ಇಸವಿಯಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ಪಡೆದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು ೨೭ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇದೆ.

ಶ್ರೀಯುತರು ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದಿರುತ್ತಾರೆ. ಕೇಂಬ್ರಿಜ್, ಹಾರ್ವರ್ಡ್, ಹೈಡಲ್ ಬರ್ಗ್, ಅಥೆನ್ಸ್, ಲೈಡನ್, ಮಾಸ್ಕೋ ವಿಶ್ವವಿದ್ಯಾನಿಲಯಗಳಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ರಾಜ್ಯ ಹಾಗು ರಾಷ್ಟ್ರ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗು ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವವನ್ನೂ ಇವರು ಪಡೆದಿದ್ದಾರೆ.
೧೯೬೦-೯೬: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೋಧನೆ
೧೯೭೮-೯೫: ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ
೧೯೯೬-೯೯: ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ
೨೦೦೨-೧೦: ಬೆಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ. ಎಸ್. ರಾಧಾಕೃಷ್ಣನ್ ಪ್ರಾಧ್ಯಾಪಕತ್ವ ಹಾಗು ೨೦೧೦ ರಿಂದ ಇದೇ ಸಂಸ್ಥೆಯಲ್ಲಿ ಎಮೆರಿಟಸ್ ಪ್ರಾಧ್ಯಾಪಕ ಸ್ಥಾನ[೧]
೨೦೦೫ ರಿಂದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ದಕ್ಷಿಣ ಭಾರತ ಶಾಖೆಯ ಗೌರವ ನಿರ್ದೇಶಕತ್ವ[೨].

uploads/authorimages/611.jpg
ಲೇಖಕರ ಇತರ ಕೃತಿಗಳು
 
ಸಾವನ್ನು ಸ್ವಾಗತಿಸಿ, ಸಾವನ್ನು ....
ಶೆಟ್ಟರ್ ಷ, Shettar S
Rs. 750
10%
ಹಳಗನ್ನಡ ಭಾಷೆ, ಭಾಷಾ ....
ಶೆಟ್ಟರ್ ಷ, Shettar S
Rs. 600    Rs. 540
10%
ಪ್ರಾಕೃತ ಜಗದ್ವಲಯ : ....
ಶೆಟ್ಟರ್ ಷ, Shettar S
Rs. 250    Rs. 225
15%
ಹಳಗನ್ನಡ : ಶೆಟ್ಟರ್ ....
ಶೆಟ್ಟರ್ ಷ, Shettar S
Rs. 1200    Rs. 1020
Best Sellers
ರೋಮಿಯೊ ಜೂಲಿಯಟ್
ವಿಲಿಯಂ ‍ಷೇಕ್‌ಸ್ಪಿಯರ್, William Shakespeare
Rs. 113/-   Rs. 125
ಕುವೆಂಪು ಕಥನ ಕೌತುಕ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 135/-   Rs. 150
ಪ್ರಾಚೀನ ಭಾರತದ ಇತಿಹಾಸ
ಸದಾಶಿವ ಕೆ, Sadashiva K
Rs. 333/-   Rs. 350
ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ
ಅನಂತರಾಮು ಟಿ ಆರ್, Anantharamu T R
Rs. 153/-   Rs. 170

Latest Books
ಚಿತ್ರ - ಕಥೆ : ಸಿನಿ ಹಾದಿಯಲ್ಲೊಂದು ಪಯಣ
ಶಶಿಧರ ಚಿತ್ರದುರ್ಗ, Shashidhara Chitradurga
Rs. 162/-   Rs. 180
ಸಂಪೂರ್ಣ ಆರೋಗ್ಯಕ್ಕೆ ಆಯುರ್ವೇದ
ದೇವರಾಜ್ ಟಿ ಎಲ್, Devaraj T L
Rs. 135/-   Rs. 150
ಬೋಳಾಯ ತಸ್ಮೈ ನಮಃ - ಲಘು ಲೇಖನಗಳು
ಡುಂಡಿರಾಜ್ ಎಚ್, Dundiraj H
Rs. 117/-   Rs. 130
ನೈಸರ್ಗಿಕ ಸಂಪನ್ಮೂಲಗಳು (ವಿಜ್ಞಾನ ಸರಳ ಪರಿಚಯ)
ಕೃಷ್ಣಮೂರ್ತಿ ಎಚ್ ಆರ್, Krishnamurthy H R
Rs. 81/-   Rs. 90


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.