|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
104 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
158874 |
ಕಲ್ಯಾಣದ ಕಥನವುಳ್ಳ ಅನೇಕ ನಾಟಕಗಳಿಗಿಂತ ಶಿವರಾತ್ರಿ ಭಿನ್ನವಾದ ದೃಷ್ಟಿಕೋನಗಳಿಂದ, ಭಿನ್ನವಾದ ನೆಲೆಯಲ್ಲಿ ಕಲ್ಯಾಣದ ಕತೆಯನ್ನು ಹೇಳುತ್ತದೆ. ಕಲ್ಯಾಣದ ಆಂದೋಲನದ ಮಹಾನ್ ಪಾತ್ರಗಳು, ನಾಯಕ ಪ್ರತಿನಾಯಕರು, ಖಳರು, ಖೂಳರು, ವಿಟರು ತುಂಟರು ಮೊದಲಾಗಿ ಇಡೀ ಒಂದು ಬ್ರಹ್ಮಾಂಡದ ನೀಲಿ ನಕಾಶೆಯೊಂದು ಸೂಳೆಗೇರಿಯ ಆವರಣದಲ್ಲಿ ಸೃಷ್ಟಿಯಾಗುತ್ತದೆ. ಆ ಕಥನದ ಎಲ್ಲಾ ಸಂಘರ್ಷಗಳು ಸಂದಿಗ್ಧಗಳು ಈವೊಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನಡೆದು ಇಂತಹ ಒಂದು ಕಥನದ ಪಾತ್ರ ಘಟನೆಗಳಿಗೆ ಅಪಾರ ಧ್ವನಿಶಕ್ತಿಯನ್ನು ತಂದುಕೊಟ್ಟಿವೆ. ಬಿಜ್ಜಳ ಬಸವರು ಮಾತ್ರವಲ್ಲದೆ ಇನ್ನಿತರ ಪಾತ್ರ ಉಪಪಾತ್ರಗಳೂ ಒಂದು ತೂಫಾನ್ ನಡುವೆಯೇ ತಮ್ಮ ಅವಿಸ್ಮರಣೀಯ ಚಹರೆಗಳನ್ನು ರಂಗದ ಮೇಲೆ ತೋರಿಸಿ ಹೋಗುತ್ತಾರೆ. ಈ ಕೃತಿಯಲ್ಲಿ ಇತಿಹಾಸ ಒಂದು ಕಥನವಾಗಿ, ಕಥನವೊಂದು ಮಿಥಿಕವಾಗಿ, ಆ ಮಿಥಿಕವು ಉತ್ಕಟ ಕಲಾತ್ಮಕ ಮತ್ತು ಅನುಭಾವೀ ಪರಾಕಾಷ್ಠೆಯನ್ನು ಮುಟ್ಟಿದೆ.
|
ಡಾ. ಚಂದ್ರಶೇಖರ ಕಂಬಾರ (ಜನನ - ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ `ಕರ್ನಾಟಕ ವಿವಿ`ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ಡಾ. ಚಂದ್ರಶೇಖರ ಕಂಬಾರರು ರಾಷ್ಟ್ರಮಟ್ಟದಲ್ಲಿ ಕನ್ನಡದ ಸಿದ್ಧಿ-ಸಾಧನೆಗಳನ್ನು ಎತ್ತಿ ಹಿಡಿದಿರುವ ಹಾಗೂ ಅದರ ಪ್ರತೀಕವಾಗಿರುವ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕಾವ್ಯ, ನಾಟಕ, ಕಾದಂಬರಿ ಮತ್ತು ಜಾನಪದ ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ಕಾಣಿಕೆಯಾಗಿತ್ತಿರುವುದು ಮಾತ್ರವಲ್ಲದೆ, ತಮ್ಮ ಆಯ್ಕೆಯ ಈ ಎಲ್ಲ ಕ್ಷೇತ್ರಗಳಿಗೆ ಹೊಸ ಆಯಾಮವನ್ನು ಜೋಡಿಸಿದ ಹಿರಿಮೆಯೂ ಅವರದಾಗಿದೆ. ತಮ್ಮ ಸಾಹಿತ್ಯ ಕೃತಿಗಳಿಗಾಗಿ ಹಲವಾರು ರ್ಟ್ರಾಯ ಪ್ರಶಸ್ತಿಗಳನ್ನು ಗಳಿಸಿದ ಅವರು ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದಾಗಲೂ ಅದೇ ವಿಕ್ರಮವನ್ನು ಮೆರೆದಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಗಳಾಗಿದ್ದ ಅವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಾಧನೆಗಳು ಕನ್ನಡ ನಾಡಿಗೇ ಹೆಮ್ಮೆಯನ್ನು ತರುವಂಥ ಸಂಗತಿಗಳಾಗಿವೆ.
|
|
| |
|
|
|
|
|
|
|
|
|