|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಶ್ರೀ ಮದ್ಭಾಗವತವು ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯವಾದ ಭಗವದ್ ಭಾಗವತ ಚರಿತ್ರೆಗಳ ಕಥಾಸಂಗ್ರಹ. ಮೂಲಗ್ರಂಥವು ಸಕಲ ಪುರುಷಾರ್ಥಗಳ ಕಾಮಧೇನು ಎಂದು ಪ್ರಸಿದ್ಧವಾಗಿ ದೇಶಾದ್ಯಂತ ಲಕ್ಷ ಲಕ್ಷ ಮನೆಗಳಲ್ಲಿ ನಿತ್ಯ ಪಾರಾಯಣ ಗ್ರಂಥವಾಗಿದೆ. ಪ್ರೇತದ ದುಃಖವನ್ನೂ ನಿವಾರಿಸಬಲ್ಲ ಈ ಶ್ರೀ ಭಾಗವತದ ಸೂಕ್ತಿಗಳೇ ಧನ್ಯ. ಮನುಷ್ಯಾದಿಗಳು ಮಾತು, ಮನಸ್ಸು, ಶರೀರಗಳಲ್ಲಿ ಮಾಡಿದ ಯಾವ ಯಾವ ಪಾಪಗಳೂ ಎಂಥವೇ ಆಗಿ ಪರಿಣಮಿಸಿ ಶರೀರವನ್ನು ಹೊಕ್ಕು ಉಳಿದಿರಲಿ - ಹಸಿ (ರಕ್ತ ಮಾಂಸಗಳಲ್ಲೋ), ಒಣಗಿದ (ಮೂಳೆ) ಮುಂತಾದವುಗಳಲ್ಲೋ, ಹಗುರವಾಗಿ (ಉಸಿರು, ಪ್ರಾಣವಾಯುಗಳಲ್ಲೋ), ಸ್ಥೂಲವಾಗಿ (ಶರೀರದ ಗಂಟುಗಳಲ್ಲೋ, ತಲೆಯ ಮೆದುಳಿನಲ್ಲೋ,) ಹೇಗೆ ಹೇಗೆ ಸಂಚಿತವಾಗಿ ಉಳಿದಿದ್ದರೂ, ಅದೆಲ್ಲವನ್ನೂ ಈ ಭಾಗವತ ಶ್ರವಣವು ಸುಟ್ಟುಹಾಕಬಲ್ಲುದು. ಅಗ್ನಿಯನ್ನು ನೋಡಿಲ್ಲವೇ? ಸೌದೆಯು ಹಸಿಯಾದರೇನು? ಒಣ ಆದರೇನು, ಬೆಳೆದ ಮರವೇನು? ಮೃದು ಹುಲ್ಲೇನು? ಸುಡದೇ? ಹಾಗೆ ಈ ಭಾರತ ದೇಶದಲ್ಲಿ, ದೇವತೆಗಳಂಥ (ಮನುಷ್ಯರ) ಸಭೆಗಳಿದ್ದೂ ಅಲ್ಲಿ ನಡೆಯುವ ಈ ಕಥಾಶ್ರವಣವನ್ನು ಮಾಡದ ಮನುಷ್ಯರ ಜನ್ಮ ವ್ಯರ್ಥ ಎಂದು ದೇವತೆಗಳೂ ಹೇಳುತ್ತಾರೆ.
|
| |
|
|
|
|
|
|
|
|
|