|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಚಿಂತನ ಪುಸ್ತಕ, Chinthana Pusthaka |
ಈಗಿನ ಮುದ್ರಣದ ಸಂಖ್ಯೆ |
: |
2 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
182 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381187029 |
ಕೋಡ್ |
: |
189380 |
ಒಂದು ನಾಗರಿಕತೆ ಉಗಮಿಸಿ ವಿಕಸಿಸುವ ಪ್ರಕ್ರಿಯೆ ತುಂಬ ಕುತೂಹಲಕಾರಿಯಾದುದು. ಸಿಂಧೂ ನದಿಬಯಲಿನ ಅಥವಾ ಸಿಂಧೂ ಕೊಳ್ಳದ ನಾಗರಿಕತೆ ಎಂಬುದಾಗಿ ಹಾಗೂ ಈಚೆಗೆ ಪ್ರಾಕ್ತನಶಾಶ್ತ್ರ ಅಧ್ಯಯನ ವರ್ತುಲಗಳಲ್ಲಿ ಹರಪ್ಪ ಸಂಸ್ಕೃತಿ ಎಂದೋ ಅಥವ ಹರಪ್ಪನ್ ನಾಗರಿಕತೆ ಎಂದೋ ಕರೆಯಲ್ಪಡುವ ಒಂದು ಸಂಕೀರ್ಣ ಸಾಮಾಜಿಕ ಅಭಿವ್ಯಕ್ತಿಯ ಕುರಿತು ಕಳೆದ ಶತಮಾನದ ಇಪ್ಪತ್ತರ ದಶಕದಿಂದ ಮೊದಲ್ಗೊಂಡು ಅಧ್ಯಯನ, ಉತ್ಖನನ, ಸಂಶೋಧನೆ, ಪ್ರಕಟಣೆ ನಡೆಯುತ್ತಲೇ ಬಂದಿವೆ.
ಸಿಂಧೂ ನಾಗರಿಕತೆ ಮತ್ತು ನಗರೀಕರಣಕ್ಕೆ ಪೂರ್ವಭಾವಿಯಾಗಿದ್ದ ನೂರಾರು ಕೃಪ್ರಧಾನ ಗ್ರಾಮೀಣ ನೆಲೆಗಳು ಪ್ರತಿನಿಧಿಸುವ ಒಂದರಿಂದೊಂದು ಪ್ರತ್ಯೇಕವೂ ವಿಭಿನ್ನವೂ ಆದ ಸಂಸ್ಕೃತಿಗಳ ಅಧ್ಯಯನ ಹಾಗೂ ಹರಪ್ಪ ನಗರೀಕರಣದ ಕೊನೆಕೊನೆಯ ಹಂತ ಹಾಗೂ ಅದರ ಅವನತಿಯ ನಂತರದ ಸಂಸ್ಕೃತಿಗಳ ಅಧ್ಯಯನ ಈಗ ಪಡೆದುಕೊಂಡ ಆದ್ಯತೆಯ ಒಂದು ನೋಟ ನಮಗೆ ಪ್ರಸ್ತುತ ಇರ್ಫಾನ್ ಹಬೀಬ್ ಅವರ ಈ ಪುಸ್ತಕದಲ್ಲಿ ದೊರೆಯುತ್ತದೆ.
ಇರ್ಫಾನ್ ಹಬೀಬ್ ಅವರ ಈ ಕೃತಿ ಈ ವಿಷಯದ ಕುರಿತು ಈಗಾಗಲೇ ಪ್ರಕಟವಾದ ಹಲವಾರು ಉತ್ಕೃಷ್ಟ, ವಿದ್ವತ್ಪೂರ್ಣ ಬರಹಗಳಿಂದ ಮಾಹಿತಿಯನ್ನು ಕ್ರೋಢೀಕರಿಸಿ ಅದನ್ನು ವಿರೋಧಾಭಾಸಗಳಿಲ್ಲದ ಒಂದು ಸುಸಂಗತ ವಿವರಣಾತ್ಮಕ ಚೌಕಟ್ಟಿನಲ್ಲಿ ಇಟ್ಟು ಪ್ರಸ್ತುತ ಪಡಿಸಿದೆ. ಒಟ್ಟಾರೆಯಾಗಿ ಓದಿಸಿಕೊಂಡು ಹೋಗುವ ಗುಣವನ್ನು ಈ ಅನುವಾದ ಹೊಂದಿದ್ದು ಅಷ್ಟರಮಟ್ಟಿಗೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಹಾಗೂ ಇತಿಹಾಸದಲ್ಲಿ ಆಸ್ಥೆಯುಳ್ಳ ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗಿದೆ.
|
ಇರ್ಫಾನ್ ಹಬೀಬ್ ನಮ್ಮ ಕಾಲದ ಶ್ರೇಷ್ಠ ಭಾರತೀಯ ಇತಿಹಾಸ ತಜ್ಞರು ಹಾಗೂ ಮಾರ್ಕ್ಸಿಸ್ಟ್ ದೃಷ್ಟಿಕೋನದಿಂದ ಬರೆಯುವ ಎಡಪಂಥೀಯ ಚಿಂತನೆಯ ಲೇಖಕರಲ್ಲಿ ಪ್ರಮುಖರು. ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಇತಿಹಾಸ ಬರಹಗಾರರು - ‘ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್’ನ ಅಧ್ಯಕ್ಷರಾಗಿದ್ದ ಇವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್. ಮೊಘಲ್ ಇಂಡಿಯಾ, ಬ್ರಿಟಿಷ್ ಇಂಡಿಯಾ, ಮಧ್ಯಕಾಲೀನ ಇಂಡಿಯಾ ಬಗ್ಗೆ ನಿಖರವಾಗಿ ಬರೆಯಬಲ್ಲವರು.
|
|
| | |
|
|
|
|
|
|
|
|