|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
2 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
52 |
ಪುಸ್ತಕದ ಗಾತ್ರ |
: |
1/4 Demy Size |
ISBN |
: |
9788184673081 |
ಕೋಡ್ |
: |
002245 |
ಸೌರಶಕ್ತಿಯ ಕಥೆ ಚಿತ್ರಮಯವಾದ ಸರಳ ಪುಸ್ತಕ. ಸೌರಶಕ್ತಿಯ ಚಾರಿತ್ರಿಕ ಬೆಳವಣಿಗೆಯ ಬಗ್ಗೆ ಇದು ವ್ಯಾಪಕ ನೋಟವನ್ನು ನೀಡುತ್ತದೆ. ಎಲ್ಲ ಮಾನವ ಸಂಸ್ಕೃತಿಯಲ್ಲೂ ಸೂರ್ಯನಿಗೆ ದೇವರ ಪಟ್ಟ ಕೊಡಲಾಗಿದೆ - ಸೂರ್ಯ ಪೂಜ್ಯ. ಗ್ರೀಕರು ಸೌರ ರಚನೆಗಳ ನಿರ್ಮಾಣದಲ್ಲಿ ಎತ್ತಿದ ಕೈ. ಚಳಿಗಾಲದಲ್ಲಿ ತಮ್ಮ ಮನೆಗಳನ್ನು ಬೆಚ್ಚಗಿಡಲು ಸೂರ್ಯನ ಬೆಳಕಿನತ್ತಲೇ ಮನೆ ಓರಣಗೊಳ್ಳುವಂತೆ ಯೋಜಿಸಿದ್ದರು. ಗಾಜಿನ ಕಿಟಕಿ ಬಳಸಿದವರಲ್ಲಿ ರೋಮನರೇ ಮೊದಲಿಗರು. ಅವರು ಹಸುರುಮನೆ ನಿರ್ಮಿಸಿದರು, ಸ್ನಾನಗೃಹಗಳನ್ನು ಕಟ್ಟಿದರು. ದಕ್ಷಿಣ ಆಫ್ರಿಕದಿಂದ ದಕ್ಷಿಣಾಕಾಶದ ನಕ್ಷೆ ತಯಾರಿಸಲು ಹೋದಾಗ ಸರ್ ವಿಲಿಯಂ ಹರ್ಷಲ್ 150 ವರ್ಷಗಳ ಹಿಂದೆ ಸೌರಶಕ್ತಿ ಬಳಸಿ ಅಡುಗೆ ಮಾಡಿದ. ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಮತ್ತು ಅನಿಲ ತ್ವರಿತವಾಗಿ ಮುಗಿದುಹೋಗುತ್ತಿವೆ. ಅವು ಮಾಲಿನ್ಯಕಾರಕ ಕೂಡ. ಹಸುರುಮನೆ ಅನಿಲಗಳನ್ನು ವಾಯುಗೋಳಕ್ಕೆ ಸೇರಿಸುತ್ತವೆ. ಇವು ಜಾಗತಿಕ ತಾಪಮಾನ ಹೆಚ್ಚಿಸುತ್ತವೆ. ಫುಕುಶಿಮ ದುರಂತದ ನಂತರ ಜಗತ್ತು ಪರಮಾಣು ಶಕ್ತಿಯ ಬಗ್ಗೆ ಮರುಚಿಂತನೆ ನಡೆಸುತ್ತಿದೆ. ಭವಿಷ್ಯದಲ್ಲಿ ಗಾಳಿ ಮತ್ತು ಸೌರಶಕ್ತಿಗಳೇ ನಮಗೆ ಶಕ್ತಿಸಂಪನ್ಮೂಲವಾಗಿ ಒದಗಿಬರಲಿವೆ. ಭಾರತದಲ್ಲಿ ಸೂರ್ಯಶಕ್ತಿ ಸಮೃದ್ಧವಾಗಿದೆ. ಇದು ಅಕ್ಷಯ ಸಂಪನ್ಮೂಲ, ಮಾಲಿನ್ಯ ರಹಿತವಾದದ್ದು. ಈ ಕುರಿತು ಗಂಭೀರವಾದ ಕಾರ್ಯಗಳಾಗಬೇಕು. ನಾವು ನಮ್ಮ ಬುದ್ಧಿಶಾಲಿಗಳನ್ನು ಅತಿ ಅಗ್ಗದ ಸೌರಕೋಶಗಳ ಸಂಶೋಧನೆಗೆ, ವಿನ್ಯಾಸಕ್ಕೆ, ಅತಿ ಸಮರ್ಥ ಸೌರ ಕುಕ್ಕರ್ ತಯಾರಿಕೆಗೆ ತೊಡಗಿಸಬೇಕಾಗಿದೆ. ವಿಕೇಂದ್ರೀಕೃತ ಸೌರಶಕ್ತಿ ಎಲ್ಲೋ ಮೂಲೆಯಲ್ಲಿರುವ ಹಳ್ಲಿಮನೆಯ ದೀಪಕ್ಕೆ ವಿದ್ಯುತ್ ಒದಗಿಸಬಲ್ಲದು. ಶಕ್ತಿ ನೀಡುವುದು ಎಂದರೆ ಇದೇ. ನಿಜಕ್ಕೂ ಜನರನ್ನು ಶಕ್ತಿವಂತರನ್ನಾಗಿ ಮಾಡುವುದು ಹೀಗೆಯೇ. ಗಾಂಧೀಜಿಯವರ ಕನಸು ನನಸಾಗಬೇಕಾಗಿರುವುದು ಈ ಬಗೆಯಿಂದಲೇ.
|
ಅರವಿಂದ ಗುಪ್ತ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ (1975). ವಿಜ್ಞಾನ ಚಟುವಟಿಕೆಗಳ ಕುರಿತು ೧೫ ಕೃತಿಗಳನ್ನು ರಚಿಸಿದ್ದಾರೆ. ಹಿಂದಿಯಲ್ಲಿ ಅವರ 140 ಕೃತಿಗಳು ಹೊರಬಂದಿವೆ. ದೂರದರ್ಶನಕ್ಕಾಗಿ ವಿಜ್ಞಾನ ಕುರಿತು 125 ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೊದಲ ಪುಸ್ತಕ ‘ಮ್ಯಾಚ್ಸ್ಟಿಕ್ ಮಾಡೆಲ್ಸ್ ಅಂಡ್ ಅದರ್ ಸೈನ್ಸ್ ಎಕ್ಸ್ಪೆರಿಮೆಂಟ್ಸ್’ ಭಾರತದ 12 ಭಾಷೆಗಳಿಗೆ ಅನುವಾದವಾಗಿದೆ; 5 ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿರುವ ರಾಷ್ಟ್ರೀಯ ಪ್ರಶಸ್ತಿಗೆ ಮೊದಲು ಭಾಜನರಾದವರು ಇವರು (1988). ಐ.ಐ.ಟಿ. ಕಾನ್ಪುರದ ಹಳೆಯ ವಿದ್ಯಾರ್ಥಿಗಳ ವಿಶೇಷ ಪ್ರಶಸ್ತಿ (2000), ಇಂದಿರಾಗಾಂಧಿ ಜನಪ್ರಿಯ ವಿಜ್ಞಾನ ಪ್ರಶಸ್ತಿ (2008), ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲು ಸ್ಥಾಪಿಸಿದ ‘ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿ’ (2010), ಇವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕೆಲವು. ಸದ್ಯ ಅವರು ಪುಣೆಯ I.U.C.A.A. ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಂತರಜಾಲದಲ್ಲಿ http://arvindguptatoys.com ಮೂಲಕ ಪುಸ್ತಕ ಮತ್ತು ಗೊಂಬೆಗಳ ಕುರಿತು ತಮ್ಮ ಆಸಕ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
|
|
| | |
|
|
|
|
|
|
|
|