Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 300   
10%
 
 
Rs. 270/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 348
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 1106295

‘ಸೂರ್ಯನ ನೆರಳು’ ಎಂಬ ಈ ಕೃತಿಯ ಪ್ರಾರಂಭದಲ್ಲಿ ಆಫ್ರಿಕಾದಲ್ಲಿ ಅವನು ಕೈಗೊಂಡ ಸಾಹಸಗಳ ಚಿತ್ರವಿದೆ. 1962ರಲ್ಲಿ ದರ್-ಎಸ್-ಸಲಾಂಗೆ ಹೋದಾಗ ಅವನ ಕಿವಿಗೆ ಸದ್ಯದಲ್ಲೇ ಉಗಾಂಡ ಸ್ವತಂತ್ರವಾಗಲಿರುವ ಸುದ್ದಿ ಕೇಳಿಸುತ್ತದೆ. ಅವನು ಮತ್ತು ಅವನ ಸ್ನೇಹಿತ ಲಿಯೋ ಕೂಡಲೇ ವನ್ಯಜೀವನದಿಂದ ತುಂಬಿತುಳುಕುತ್ತಿರುವ ಸೆರೆಂಗೆಟಿಯ ಮೂಲಕ ಕಂಪಾಲಾಕ್ಕೆ ಹೊರಡುತ್ತಾರೆ. ಸೆರೆಂಗೆಟಿಯಲ್ಲಿ “ಎಲ್ಲವೂ ಅಸಂಭವನೀಯ-ವೆನ್ನುವಂತೆ, ನಂಬಲಸಾಧ್ಯವೆನ್ನುವಂತೆ ಗೋಚರಿಸುತ್ತದೆ. ಪ್ರಪಂಚದ ಹುಟ್ಟನ್ನು ಕಣ್ಣಾರೆ ನೋಡುತ್ತಿರುವೆವೇನೋ ಎಂಬಂತೆ ಭೂಮಿ, ಆಕಾಶ, ನೀರು, ಸಸ್ಯ ಹಾಗೂ ಪ್ರಾಣಿಸಂಕುಲಗಳೆಲ್ಲ ಇದ್ದು ಆಡಮ್ ಮತ್ತು ಈವ್‍ರ ಜನ್ಮವಿನ್ನೂ ಆಗಿರದಿದ್ದ ಕ್ಷಣಗಳಿಗೆ ಸಾಕ್ಷಿಯಾದೆವೇನೋ ಎನ್ನುವ ಭಾವನೆ ತುಂಬಿಕೊಳ್ಳುತ್ತದೆ. ಇದು ಈಗಷ್ಟೇ ಮೈದಳೆದ ಪ್ರಪಂಚ. ಮನುಕುಲದ ಅಸ್ತಿತ್ವವೇ ಇಲ್ಲದ ಕಾರಣ ಪಾಪದ ಸೋಂಕು ಇನ್ನೂ ತಾಕಿರದ ಲೋಕ. ಕಲ್ಪಿಸಿಕೊಳ್ಳಬಹುದಾದದ್ದನ್ನು ನೋಡಲೂ ಸಾಧ್ಯವಿರುವ ಜಗತ್ತು.” ಹಾಗಾಗಿ ನಕ್ಷೆಗಳಿಲ್ಲದ ಅವರು ದಾರಿ ತಪ್ಪುತ್ತಾರೆ. “ದಿಗಂತದವರೆಗೂ ಹಬ್ಬಿದಂತೆ ಕಾಣುವ ಬೃಹತ್ ಗಾತ್ರದ” ಕಾಡೆಮ್ಮೆಗಳನ್ನು ಎದುರಿಸುತ್ತಾರೆ. “ಮಾರ್ಗದ ಮಧ್ಯದಲ್ಲಿದ್ದ ಎಮ್ಮೆಗಳು... ನಿಧಾನಕ್ಕೆ ಅರೆನಿದ್ರಾವಸ್ಥೆಯಲ್ಲಿಯೇ ಸ್ವಲ್ಪ ಸ್ವಲ್ಪ ಜರುಗತೊಡಗಿದವು. ಕಾರು ಅವುಗಳ ಬದಿಯನ್ನು ಸವರಿಕೊಂಡೇ ಹೋಗುತ್ತಿದ್ದರೂ ಅವು ಅಗತ್ಯಕ್ಕಿಂತ ಹೆಚ್ಚು ಒಂದು ಸೆಂಟಿಮೀಟರ್ ಕೂಡ ಸರಿಯುತ್ತಿರಲಿಲ್ಲ.” ಆದರೂ ಅವರು ಎದೆಗುಂದುವುದಿಲ್ಲ. ಬಿಸಿಲು ಇಡೀ ಮೈಯನ್ನು ಉರಿಸುತ್ತದೆ. ಎಲ್ಲೆಡೆ ಬೆಂಕಿಯುಗುಳುವ ಗಾಳಿ ಪ್ರವಹಿಸುತ್ತದೆ. ಕಪುಶಿನ್‍ಸ್ಕಿ ಭ್ರಮಾಧೀನನಾಗುತ್ತಾನೆ. ಎಲ್ಲೆಂದು ಸ್ಪಷ್ಟವಾಗಿ ತಿಳಿಯದ ಜಾಗವನ್ನು ತಲುಪಿದಾಗ ಅವನು ‘ಅರ್ಧ ಸತ್ತಂತೆ’ ಆಗಿರುತ್ತಾನೆ. ಒಂದು ಬಂಕಿನ ಮೇಲೆ ಕುಸಿದುಬಿದ್ದಾಗ ಅವನ ಕೈಯಿಗೆ ಕೆಲವೇ ಅಂಗುಲಗಳಷ್ಟು ದೂರವಿರುತ್ತದೆ, ಭಯಂಕರವಾದೊಂದು ಈಜಿಪ್ಷಿಯನ್ ಸರ್ಪ. ಲಿಯೊ ಆ ಸರ್ಪದ ಮೇಲೊಂದು ತಗಡಿನ ಡಬ್ಬವನ್ನು ಮಗುಚಿ ಹಾಕಿದ್ದೇ ಅದು ಇಡೀ ಗುಡಿಸಲನ್ನು ನಡುಗಿಸುವಂತೆ ಸದ್ದುಮಾಡುತ್ತದೆ. ಅಂತೂ ಇಂತೂ ಅವರು ಕಂಪಾಲಾವನ್ನು ತಲಪುವಹೊತ್ತಿಗೆ ಕಪುಶಿನ್‍ಸ್ಕಿ ಜ್ವರದಿಂದ ಬಡಬಡಿಸುತ್ತಾನೆ. ಹಾಗೂ ಹೀಗೂ ಚೇತರಿಸಿಕೊಳ್ಳುವ ಹೊತ್ತಿಗೆ ಅವನಿಗೆ ಕ್ಷಯರೋಗ ತಗಲಿದ ಸೂಚನೆ. ಹಾಗೆ ನೋಡಿದರೆ, ಈ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಅವನು ಬೆವರಿನಿಂದ ತೊಯ್ದುಹೋಗಿದ್ದಾನೆ.

-ಅಶೋಕ ಹೆಗಡೆ

Best Sellers
ಪಕ್ಷಿಕಾಶಿ (ಕಾವ್ಯ)
ಕುವೆಂಪು, Kuvempu
Rs. 74/-   Rs. 78
ಶ್ರಾವಣ ಪೂರ್ಣಿಮಾ
ಸಾಯಿಸುತೆ, Saisuthe
Rs. 117/-   Rs. 130
ಆಡಳಿತ ಕನ್ನಡ
ಪ್ರಧಾನ ಸಂಪಾದಕರು: ಮುಖ್ಯಮಂತ್ರಿ ಚಂದ್ರು, Mukyamantri C
Rs. 95/-   Rs. 100
ಶತಮಾನದ ಸಣ್ಣ ಕತೆಗಳು
ದಿವಾಕರ್ ಎಸ್, Diwakar S
Rs. 539/-   Rs. 599

Latest Books
ಮಧ್ಯಕಾಲೀನ ಕರ್ನಾಟಕ ಚರಿತ್ರೆಯಲ್ಲಿ ದಲಿತರು
ದೇವರಾಜ ಓ, Devaraja O
Rs. 198/-   Rs. 220
ಚೆ ಗೆವಾರನ ನೆಲದಲ್ಲಿ : ಬೆಜಿಲ್, ಅರ್ಜೆಂಟೀನಾ, ಚಿಲಿ, ಪೆರು ಪ್ರವಾಸ ಕಥನ
ಅನುಪಮಾ ಎಚ್ ಎಸ್, Anupama H S
Rs. 180/-   Rs. 200
ಮರೆಯಾದ ಮಾರಮ್ಮ : ಹದಿನೇಳು ಕಥೆಗಳು
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 153/-   Rs. 170
ಭಾರತ ಕಥಾಮಿತ್ರ
ವಿ ಗಣೇಶ್, ಸಾಗರ, V Ganesh Sagar
Rs. 203/-   Rs. 225


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.