|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿವರಣೆ:
"ತಾಷ್ಕೆಂಟ್ ಡೈರಿ" ಭಾರತದ ಎರಡನೇ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕುರಿತ ಅಪರೂಪದ ಪುಸ್ತಕ. ಈ ಪುಸ್ತಕ ಒಂದು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಮಹಾನ್ ವ್ಯಕ್ತಿಯೊಬ್ಬರ ಜೀವನ ಕಥನ. ವ್ಯಕ್ತಿಯೊಬ್ಬ ತನ್ನ ಆದರ್ಶ ಮತ್ತು ಉದಾತ್ತ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಹೇಗೆ ಕೊಂಡೊಯ್ಯಬಲ್ಲ ಎನ್ನುವುದಕ್ಕೆ ಜ್ವಲಂತ ನಿದರ್ಶನ. ಇಲ್ಲಿ ಶಾಸ್ತ್ರೀಜಿಯವರ ಸಾರ್ವಜನಿಕ ಬದುಕಿನ ಹತ್ತಾರು ಮನಕಲಕುವ ಘಟನೆಗಳಿವೆ. ಪ್ರಧಾನ ಮಂತ್ರಿಯಾಗಿ ಅವರು ದೇಶವನ್ನು ಮುನ್ನಡೆಸಿದ ವರ್ಣನೆಯಿದೆ. 1965ರಲ್ಲಿ ಭಾರತ-ಪಾಕೀಸ್ತಾನದ ನಡುವೆ ನಡೆದ ಭಯಾನಕ ಯುದ್ಧದ ಕಥನವಿದೆ. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿ ತೆಗೆದುಕೊಂಡ ದಿಟ್ಟ ನಿರ್ಧಾರಗಳ ವಿವರಣೆ ಇದೆ. ಶಾಂತಿದೂತನಂತೆ ತಾಷ್ಕೆಂಟಿಗೆ ತೆರಳಿ ಹೆಣವಾಗಿ ಭಾರತಕ್ಕೆ ಮರಳಿದ ಕಣ್ಣೀರ ಕಥೆಯಿದೆ. ಆ ನಂತರ ಆಸ್ಫೋಟಗೊಂಡ ಭಾರತೀಯರ ಆಕ್ರೋಷದ ವಿವರಣೆ ಇದೆ. ಅವರ ಸಾವಿನ ಕುರಿತ ಸತ್ಯಾನ್ವೇಷಣೆ ಇದೆ. ಅವರ ಸಾವಿನ ಸುತ್ತ ಹೆಣೆದುಕೊಂಡ ಅನುಮಾನದ ಸಂಪೂರ್ಣ ವಿಶ್ಲೇಷಣೆಯಿದೆ. ಒಟ್ಟಾರೆ ಕನ್ನಡದ ಓದುಗರಿಗೆ ಇದೊಂದು ಅಪರೂಪದ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ.
|
| |
|
|
|
|
|
|
|
|
|