|
|
|

| Rs. 250 | 10% |
Rs. 225/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತದ ಬಹುಪಾಲು ರಾಜ ಮಹಾರಾಜರು, ನವಾಬರು, ಬ್ರಿಟಿಷ್ ವಸಾಹತುಶಾಹಿಯ ಎದುರು ಮಂಡಿಯೂರಿ ಶರಣಾಗಿ, ಹೊಂದಾಣಿಕೆ ಮಾಡಿಕೊಂಡು ಸಾಮಂತರಾಗಿ ಬದುಕಿನ ನಿರ್ಲಜ್ಜ ಚರಿತ್ರೆಯ ವಾಸ್ತವದ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನರ ಮಹತ್ವವನ್ನು ನಾವು ಗುರುತಿಸಬೇಕಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಯುದ್ಧ ಭೂಮಿಯಲ್ಲಿ ಹೋರಾಡುತ್ತಲೇ ಹುತಾತ್ಮರಾದ ಟಿಪ್ಪು ಸುಲ್ತಾನ್, ಮಕ್ಕಳನ್ನು ಒತ್ತೆಯಿಟ್ಟು ಆತ್ಮಗೌರವವನ್ನು ಕಾಪಾಡಿಕೊಂಡ ಧೀಮಂತ ವ್ಯಕ್ತಿ.
ದಕ್ಷ ಆಡಳಿತ, ಪ್ರಜಾನುರಾಗ, ಅನ್ಯಮತ ಸಹನೆಗೆ ಹೆಸರಾಗಿದ್ದ ಟಿಪ್ಪು ಸುಲ್ತಾನರ ಬಗೆಗೆ ಚರಿತ್ರೆಯಲ್ಲಿ ನ್ಯಾಯ ಸಿಕ್ಕಿಲ್ಲ. ವಸಾಹತುಶಾಹಿ ಚರಿತ್ರಕಾರರಂತೆ ಮತಾಂಧ ಚರಿತ್ರಕಾರರೂ ಅವರಿಗೆ ಅನ್ಯಾಯವೆಸಗಿದ್ದಾರೆ. ಇದನ್ನು ಸರಿಪಡಿಸಿ, ವಿಸ್ಮೃತಿಗೆ ತಳ್ಲಲಾಗಿರುವ ಸತ್ಯವನ್ನು ಹುಡುಕಿ ತೆಗೆಯುವ ಅಗತ್ಯವಿದೆ. ಚಾರಿತ್ರಿಕ ದಾಖಲೆಗಳಂತೆ ಜಾನಪದ ಮಾಹಿತಿಗಳೂ ಈ ಕೆಲಸಕ್ಕೆ ಪೂರಕವಾಗುತ್ತವೆ. ‘ಟಿಪ್ಪು ಸುಲ್ತಾನ್ ಕಾಲದ ಪ್ರಸಂಗಗಳು’ ಈ ದಿಸೆಯಲ್ಲಿ ಒಂದು ಅಪೂರ್ವ ಪ್ರಯತ್ನವಾಗಿದೆ.
|
| |
|
|
|
|
|
|
|
|
|