|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ತ್ರಿಲೋಕ ಸಂಚಾರಿ ನೀರೆ
ಅದೊಂದು ನಗರ. ನಮ್ಮ ನಿಮ್ಮಂಥಹವರೇ ವಾಸಿಸುವ ಸಂಚಾರ ಮಾಡುವಂಥಹ ನಗರ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದೊಂದಿಗೆ ರೋಬೋಟೀಕರಣವೂ ಸೇರಿ ಬಹುತೇಕ ಕಾರ್ಯಗಳು ಹೊರಗುತ್ತಿಗೆ ಆಧಾರದ ಮೇಲೆ ನಡೆಯುತ್ತಿರುವಾಗ ನಗರ ವ್ಯವಸ್ಥೆಯೂ ಇದಕ್ಕೆ ಹೊರತಾಗಿರುವುದಿಲ್ಲ.
ಮೂರು ಬಗೆಯ ಸಂಚಾರ ವ್ಯವಸ್ಥೆಯಲ್ಲಿ ಎಲ್ಲವೂ ಸುಗಮವಾಗಿ ಸಾಗುವಾಗಲೇ ಅವಘಡಗಳು ಎದುರಾಗುತ್ತವೆ. ಒಂದನ್ನು ತಹಬಂದಿಗೆ ತರುವಷ್ಟರಲ್ಲಿ ಮತ್ತೊಂದು ಮಗದೊಂದು ಏಳುತ್ತವೆ. ಈ ಮಧ್ಯೆ ಟ್ರಾಫಿಕ್ವಾರ್ಡನ್ ಆದ ಹನ್ಸಾಳ ಜಾಡಿನಲ್ಲಿ ಸಾಗುವ ಕಥಾಹಂದರದಲ್ಲಿ ಟ್ರಾಫಿಕ್ ಇಂಜಿನೀಯರ್ ಅವಿರತ್ನ ಆಗಮನವೂ ಆಗುತ್ತದೆ. ಈರ್ವರ ಸಂವಾದ ಹಾಗೂ ಒಡನಾಟದ ಲಹರಿಯ ಮಧ್ಯೆ ರೋಬಾಟ್ಗಳೊಂದಿಗೆ ಅರೆಮಾನವ ಪಡೆಯ ಹೋರಾಟ ಸಾಗುತ್ತದೆ. ಇದರಲ್ಲಿ ಅಂತಿಮ ಗೆಲುವು ಯಾರಿಗೆ ಎಂಬುದನ್ನು ಈ ವೈಜ್ಞಾನಿಕ ಕಾದಂಬರಿ ಓದಿಯೇ ತಿಳಿಯಬೇಕು.
ಆಧುನೀಕರಣ ತಂದೊಡ್ಡುವ ಸವಾಲಿಗೆ ನಗರ ಸಜ್ಜಾಗುವ ಪರಿ ಮುಂದೊಂದು ದಿನ ಈ ಕಲ್ಪನೆ ವಾಸ್ತವವಾಗುವ ಸಂಭವನೀಯತೆಯನ್ನು ತಳ್ಳಿ ಹಾಕುವಂತಿಲ್ಲ. ಈಗಾಗಲೇ ಹಲವಾರು ಕೃತಿಗಳ ಮೂಲಕ ಕನ್ನಡ ಓದುಗರಿಗೆ ಪರಿಚಿತರಾಗಿರುವ ಲೇಖಕಿ ಹಾಗೂ ಪೊಲೀಸ್ ಅಧಿಕಾರಿ ಸವಿತಾ ಶ್ರೀನಿವಾಸ ಅವರಿಂದ ವಿಚಾರಮಂಥನಕ್ಕೆ ಹಚ್ಚುವ ವಿಶಿಷ್ಟ ವೈಜ್ಞಾನಿಕ ಕಾದಂಬರಿ.
|
| |
|
|
|
|
|
|
|
|
|