Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 400    
10%
Rs. 360/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 468
ಪುಸ್ತಕದ ಗಾತ್ರ : 1/8 Demy Size
ಕೋಡ್ : 1103047

ಕನ್ನಡ ಸಂಶೋಧನೆಯ ಕ್ಷೇತ್ರದಲ್ಲಿ ಕೆಲವೇ ಜನ ಪ್ರಾತಃಸ್ಮರಣೀಯರಲ್ಲಿ ಹಂಪನಾ ಕೂಡಾ ಒಬ್ಬರು. ಕನ್ನಡದ ಜೈನ ಪರಂಪರೆಯ ಬಗ್ಗೆ ಅಪಾರವಾದ ಒಳನೋಟಗಳನ್ನು ಕೊಡುವ ಅವರ ಬರವಣಿಗೆ ಕನ್ನಡಕ್ಕೆ ಅನನ್ಯವಾದದ್ದೂ ಕೂಡಾ. ಕನ್ನಡದ ಪ್ರಾಮುಖ್ಯತೆಯನ್ನು ಎತ್ತಿತೋರುತ್ತಾ ಯಾವತ್ತೂ ಬಹುತ್ವದ ನಂಬಿಕೆಯಲ್ಲಿ ಬರೆಯುತ್ತಲಿರುವ ಹಂಪನಾ ವಿದ್ವತ್ ಜಗತ್ತಿನಲ್ಲಿ ಬಹು ಚರ್ಚಿತರಾದವರು. ಅವರು ಕೈಗೆತ್ತಿಕೊಂಡು ಬರೆದ ವಡ್ಡಾರಾಧನೆ ಸಮಗ್ರ ಅಧ್ಯಯನ ಪುನರ್‍ಮುದ್ರಣಗೊಳ್ಳುತ್ತಿರುವುದು ಸಂತಸದ ಸಂಗತಿ. ಹದಿನೇಳು ವರ್ಷಗಳ ಅವಧಿಯಲ್ಲಿ ಮಹತ್ವದ ಈ ಪುಸ್ತಕ ಮೊದಲಬಾರಿಗೆ ಪುನರ್‍ಮುದ್ರಣ ಆಗುತ್ತಿರುವುದು ವೈಯಕ್ತಿಕವಾಗಿ ನನಗೆ ಅಚ್ಚರಿಯ ಸಂಗತಿಯೇ. ಇಂಥಾ ಹೊತ್ತಿನಲ್ಲಿ ಕನ್ನಡದ ಓದುಗವರ್ಗದ ಆಯ್ಕೆಗಳ ಬಗ್ಗೆ ಅನೇಕ ಪ್ರಶ್ನೆಗಳನ್ನೂ, ಕುತೂಹಲವನ್ನೂ ಹುಟ್ಟುಹಾಕುತ್ತಿದೆ.

ವಡ್ಡಾರಾಧನೆ ಅನೇಕ ಕಾರಣಗಳಿಂದ ಕನ್ನಡದ ಮಹತ್ವದ ಕೃತಿ. ಉಪಸರ್ಗ ಕೇವಲಿಗಳ ಕಥೆ, ವಡ್ಡಕಥೆ ಎಂದೂ ಕರೆಯಲ್ಪಡುತ್ತಿದ್ದ ಈ ಕಥೆಗಳು ಜಿನಧರ್ಮದ ಸಾರವನ್ನು ಹೇಳುವಂಥದ್ದೇ ಆದರೂ ಕನ್ನಡದ ಕಥನ ಪರಂಪರೆಯಲ್ಲಿ ಈ ಕೃತಿಯು ಅನೇಕ ಕಾರಣಕ್ಕಾಗಿ ಈಗಲೂ ಆದ್ಯ ಕೃತಿಯಾಗಿದೆ. ಕನ್ನಡದ ಲಿಖಿತ ಮತ್ತು ಅಲಿಖಿತ ಪಠ್ಯಗಳ ಮಾದರಿಗಳ ನಡುವೆ ಸಿಗುವ ಈ ಕೃತಿ ಎರಡರ ಲಕ್ಷಣಗಳನ್ನೂ ಒಳಗೊಂಡಿದೆ. ನಿರ್ದಿಷ್ಠ ಚೌಕಟ್ಟಿನ ಒಳಗಿದ್ದೂ, ಅದನ್ನು ಮೀರುವ ಈ ಕೃತಿಯ ಕಥನ ಸ್ವರೂಪ, ನಿರೂಪಣೆ, ಕೃತಿಕೇಂದ್ರದ ವಿಕೇಂದ್ರೀಕರಣ ಎಲ್ಲವೂ ಈ ಹೊತ್ತಿಗೂ ಹೊಸ ಸವಾಲುಗಳನ್ನು ಒಡ್ಡುತ್ತಲೆ ಇವೆ. ಈ ಹೊತ್ತು ಬರೆಯುವವರಿಗೆ ಅದರ ಮಾದರಿ ಮತ್ತು ವಿನ್ಯಾಸ, ತಂತ್ರ ಮತ್ತು ನಿರೂಪಣೆ, ವಸ್ತು ನಿರ್ವಹಣೆ ಇಂಥಾ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಲ್ಲಿ ಕೊಂಚ ಹೊತ್ತು ವಿರಮಿಸಿದರೂ ಹೊಸ ಚೈತನ್ಯಪೂರ್ಣವಾದ ಬರವಣಿಗೆ ಸಾಧ್ಯವಾದೀತು.

-ಪಿ. ಚಂದ್ರಿಕಾ

ಲೇಖಕರ ಇತರ ಕೃತಿಗಳು
10%
ದ್ರಾವಿಡ ಭಾಷಾವಿಜ್ಞಾನ
ಹಂಪ ನಾಗರಾಜಯ್ಯ, Hampa Nagarajaiah
Rs. 200    Rs. 180
10%
ದ್ರಾವಿಡ ಭಾಷಾವಿಜ್ಞಾನ
ಹಂಪ ನಾಗರಾಜಯ್ಯ, Hampa Nagarajaiah
Rs. 200    Rs. 180
Best Sellers
ವಿಶ್ವಗುರು ಬಸವಣ್ಣನವರು : ಬಸವಣ್ಣನವರ ಜೀವನ ಚರಿತ್ರೆ
ಚಿದಾನಂದಮೂರ್ತಿ ಎಂ, Chidanandamurthy M
Rs. 81/-   Rs. 90
ಮೂರು ದಾರಿಗಳು
ಯಶವಂತ ಚಿತ್ತಾಲ, Yeshwanth Chittal
Rs. 200/-
Advanced English Grammar
Martin Hewings
Rs. 220/-
ಆಚಾರ್ಯ ವಿನೋಬಾ ಭಾವೆ (ವಿಶ್ವಮಾನ್ಯರು)
ಆನಂದ್ ಎನ್ ಎಲ್, Anand N L
Rs. 23/-   Rs. 25

Latest Books
ಮಾಂಸದಂಗಡಿಯ ನವಿಲಿ (ಹನುಮಂತಯ್ಯ ಕವಿತೆಗಳು)
ಹನುಮಂತಯ್ಯ ಎನ್ ಕೆ, Hanumantaiah N K
Rs. 126/-   Rs. 140
ಹರಿಶ್ಚಂದ್ರ ಕಾವ್ಯ ಸಂಗ್ರಹ : ಮೈಸೂರು ವಿಶ್ವವಿದ್ಯಾನಿಲಯ
ಪ್ರದಾನ ಸಂಪಾದಕರು : ಡಾ ಕೆ ವಿ ಪುಟ್ಟಪ್ಪ, K V Puttappa
Rs. 75/-
ಕಗ್ಗರಸಧಾರೆ ಸಂಪುಟ-3: ಡಿವಿಜಿಯವರ ಮಂಕುತಿಮ್ಮನ ಕಗ್ಗಗಳ ರಸಧಾರೆ
ರವಿ ತಿರುಮಲೈ, Ravi Thirumalai
Rs. 225/-   Rs. 250
ಜಮೀಲಾ ಜಾವೇದ ಮತ್ತು ಇತರ ಕಥೆಗಳು
ಹಮೀದ ದಳವಾಯಿ, Hamid Dalwai
Rs. 77/-   Rs. 85


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.