|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕತೆ, ಕವಿತೆ, ಪ್ರಬಂಧ, ಆತ್ಮಕತೆಗಳ ನಿರೂಪಣೆ, ಮಕ್ಕಳ ನಾಟಕ, ಸ್ಮೃತಿಕಥನ, ಅನುವಾದ, ರೂಪಾಂತರ - ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತನ್ನ ಅನನ್ಯ ಕೊಡುಗೆ ನೀಡಿದ ಲೇಖಕಿ ಶ್ರೀಮತಿ ವೈದೇಹಿ. ಪ್ರಾದೇಶಿಕ ಭಾಷೆಯನ್ನಷ್ಟೇ ಅಲ್ಲ, ಗ್ರಾಂಥಿಕ ಭಾಷೆ, ಕಾವ್ಯಾತ್ಮಕ ಭಾಷೆಗಳನ್ನೂ ಸಾರ್ಥಕ ಸಾಮಯಿಕ ಹಾಗೂ ಸಮರ್ಪಕವಾಗಿ ದುಡಿಸಿಕೊಳ್ಳುವ ಸಾಮರ್ಥ್ಯದ ಅಪರೂಪದ ಲೇಖಕಿ. ಸ್ವಂತಿಕೆ, ವಿಶಿಷ್ಟ ಸಂವೇದನೆ ಹಾಗೂ ಸೂಕ್ಷ್ಮತೆಯಿಂದಾಗಿ ಅವರ ಕೃತಿಗಳು ‘ಸ್ವಯಂಪ್ರಭೆ’ಗಳೆಂದೇ ಹೇಳಬೇಕು.
ಯಾವತ್ತೂ ಲೇಖಕರ ಧ್ವನಿಯಲ್ಲೇ ಅವರ ಕೃತಿಗಳನ್ನು ಕೇಳುವುದು ಒಂದು ಮಹತ್ವದ ಅನುಭವವಷ್ಟೆ? ಓದಿನ ದೃಷ್ಟಿ ಹಿಗ್ಗಿಸುವ ಅನುಭವವದು. ಈ ದಿಸೆಯಲ್ಲಿ ಶ್ರೀಮತಿ ವೈದೇಹಿಯವರೇ ವಾಚಿಸಿದ ಅವರ ಕೆಲ ಆಯ್ದ ಕತೆ ಮತ್ತು ಕವನಗಳ ಈ ಕೇಳು-ಪುಸ್ತಕದ ಪ್ರಕಟಣೆ ಒಂದು ಬಹುವಾಂಛಿತ ಪ್ರಯೋಗ.
|
| |
|
|
|
|
|
|
|
|
|