|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಕಷ್ಟವೇನಲ್ಲ. ಏಕೆಂದರೆ ಅದು ಮನುಷ್ಯನ ಸಹಜ ಸ್ವಭಾವ. ಹೊರಗಿನ ವ್ಯಕ್ತಿ, ಶಕ್ತಿಗಳ ಪ್ರಭಾವದಿಂದ ಬೆಳೆಯುವ ಅತೀಂದ್ರಿಯ ನಂಬಿಕೆಗಳಿಗೆ ಬೆಲೆ ಕೊಡದಿದ್ದರೆ, ಅತಾರ್ಕಿಕ ನಂಬಿಕೆಗಳನ್ನು ಬೆಳೆಸಿಕೊಳ್ಳದಿದ್ದರೆ ಸಾಕು. ಈಗಾಗಲೇ ಬೆಳೆದಿರುವ ಮೂಢನಂಬಿಕೆಗಳನ್ನು ಅರ್ಥ ಮಾಡಿಕೊಂಡರೆ ಅವುಗಳನ್ನೂ ಬಿಡುವುದು, ಅವುಗಳ ಸ್ಥಾನದಲ್ಲಿ ವೈಜ್ಞಾನಿಕ ಜಿಜ್ಞಾಸೆಯನ್ನು ಬೆಳೆಸಿಕೊಳ್ಳುವುದು ಸುಲಭ.
ಶಿಕ್ಷಣ, ಜಾಗೃತಿಯ ಮೂಲಕ ವ್ಯಕ್ತಿ ಮತ್ತು ಕುಟುಂಬಗಳಲ್ಲಿ ಆತ್ಮವಿಶ್ವಾಸವನ್ನು, ಸ್ವಾವಲಂಬನೆಯನ್ನು ಬೆಳೆಸಬಹುದಾಗಿದ್ದ ಟಿವಿ ಮಾಧ್ಯಮ ಇಂದು ಲಾಭಕೋರರ ಕೈಯಲ್ಲಿ ಸಿಲುಕಿಕೊಂಡಿರುವ ಉದ್ಯಮವಾಗಿ ಜನರಲ್ಲಿರುವ ಮೌಢ್ಯವನ್ನು ಪೋಷಿಸುವುದಷ್ಟೇ ಅಲ್ಲ, ಹೊಸ ಹೊಸ ಮೂಢಾಚರಣೆಗಳನ್ನು ಜನರಲ್ಲಿ ಹೇಗೆ ಬಿತ್ತುತ್ತಿದೆ ಎಂಬುದನ್ನು ಈ ಪುಸ್ತಕವು ಬಯಲು ಮಾಡುತ್ತದೆ.
ಅತ್ಯಂತ್ರ ಕ್ರೂರ ಮತ್ತು ಅಮಾನವೀಯವಾದ ಮೂಢಾಚರಣೆಗಳನ್ನು ಈಗಲಾದರೂ ತೊಡೆದುಹಾಕಿ ಮನುಷ್ಯನ, ಮುಖ್ಯವಾಗಿ ಮಹಿಳೆ ಮತ್ತು ಮಕ್ಕಳ ಜೀವ, ಜೀವನವನ್ನು ಕಾಪಾಡುವ ಸದುದ್ದೇಶದಿಂದ ಸರಕಾರವು ಒಂದು ವಿಧೇಯಕವನ್ನು ತರಲು ಪ್ರಯತ್ನಿಸಿತು. ಆದರೆ ಇದರ ವಿರುದ್ಧದ ಹಿತಾಸಕ್ತಿಗಳ ಪ್ರಚೋದನೆಯಿಂದ ಜನ ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿತು. ಈ ವಿಧೇಯಕ ಮೂಲ ತಿರುಳು ಮತ್ತು ಉದ್ದೇಶವನ್ನು ಈ ಪುಸ್ತಕವನು ವಿಷದಪಡಿಸುತ್ತದೆ.
|
| |
|
|
|
|
|
|
|
|
|