|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವೈಣು ಬಪ್ಪು ಅಪ್ಪಟ ಭಾರತೀಯ ಪ್ರತಿಭೆ. ವಿದ್ಯಾರ್ಥಿಯಾಗಿದ್ದಾಗಲೇ ಒಂದು ಹೊಸ ಧೂಮಕೇತುವನ್ನು ಪತ್ತೆಹಚ್ಚಿದರು. ಇದು ಒಂದು ಭಾರತೀಯ ದಾಖಲೆ. ಹಾಗೆಯೇ ಪ್ರತಿಷ್ಠಿತ ಕಾರ್ನೆಜಿ ಫೆಲೊಶಿಪ್ ಗಿಟ್ಟಿಸಿಕೊಂಡ ಪ್ರಥಮ ಭಾರತೀಯ. ‘ವಿಲ್ಸನ್-ಬಪ್ಪು ಪರಿಣಾಮ‘ ಇವರು ಖಗೋಲ ಶಾಸ್ತ್ರಕ್ಕಿತ್ತ ಕೊಡುಗೆ. ವೈಣು ಬಪ್ಪು ಭಾರತೀಯ ಖಗೋಳ ವೈಜ್ಞಾನಿಕ ಒಕ್ಕೂಟದ ಸ್ಥಾಪಕ. ಅಂತಾರಾಷ್ಟ್ರೀಯ ಖಗೋಳ ವೈಜ್ಞಾನಿಕ ಒಕ್ಕೂಟದ ಅಧ್ಯಕ್ಷರಾದ ಏಕೈಕ ಭಾರತೀಯ. ಭಾರತ ಸರ್ಕಾರವು ಕಾವಲೂರಿನಲ್ಲಿ ಸ್ಥಾಪಿಸಿದ ನಕ್ಷತ್ರ ವೀಕ್ಷಣಾಲಯಕ್ಕೆ ವೈಣು ಬಪ್ಪು ಅವರ ಹೆಸರನ್ನು ನೀಡಿ, ಅವರನ್ನು ಪದ್ಮಭೂಷಣ ಪ್ರಶಸ್ತಿಯೊಡನೆ ಗೌರವಿಸಿದೆ. ಅಂತಾರಾಷ್ಟ್ರೀಯ ಖಗೋಲ ವೈಜ್ಞಾನಿಕ ಒಕ್ಕೂಟದ ಕಾರ್ಯದರ್ಶಿ ರಿಚರ್ಡ್ ವೆಸ್ಟ್ ಅವರು ಕ್ಷುದ್ರಗ್ರಹವೊಂದಕ್ಕೆ ವೈಣು ಬಪ್ಪು ಅವರ ಹೆಸರನ್ನು ಇಟ್ಟು ಗೌರವಿಸಿದರು. ವೈಣು ಬಪ್ಪು ಎಂಬ ಮಹಾನ್ ತಾರೆಯು ಭಾರತ ದೇಶದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವುದರ ಜೊತೆಗೆ, ಭಾರತದಲ್ಲಿ ಆಧುನಿಕ ಖಗೋಳಶಾಸ್ತ್ರಕ್ಕೆ ಭದ್ರವಾದ ಬುನಾದಿಯನ್ನು ಹಾಕಿದರು.
|
ಡಾ|| ಎಮ್ ಎಸ್ ಎಸ್ ಮೂರ್ತಿಯವರು ‘ಭಾಭಾ ಪರಮಾಣು ಅನುಸಂಧಾನ ಕೇಂದ್ರ, ಮುಂಬಯಿ’ ಇಲ್ಲಿ ಹಿರಿಯ ವಿಜ್ಞಾನಿಯಾಗಿ ೪೦ ವರ್ಷ ಸೇವೆ ಸಲ್ಲಿಸಿದವರು. ಇವರು ಬರೆದ ‘ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು’, ‘ಬೈಜಿಕ ವಿದ್ಯುತ್’ ಮತ್ತು ‘ಕಾಲರಾ ನಂಜು’ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
|
|
| |
|
|
|
|
|
|
|
|
|