|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಕಿತ್ತೂರು ಚೆನ್ನಮ್ಮನ ಹೋರಾಟವನ್ನು ಮುಂದುವರೆಸಿದ ಧೀರ. ಇಂದು ನಾವು ಯಾವ ರಣತಂತ್ರವನ್ನು ‘ಗೆರಿಲ್ಲ ಯುದ್ಧ‘ವೆಂದು ಕರೆಯುತ್ತೇವೆಯೋ ಅದನ್ನು ಸಮರ್ಥವಾಗಿ ಬಳಸಿಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾದ. ಬ್ರಿಟಿಷರು ಭಾರತೀಯರ ದೌರ್ಬಲ್ಯಗಳನ್ನು ಚೆನ್ನಾಗಿ ತಿಳಿದಿದ್ದವರಾದ ಕಾರಣ, ತಂತ್ರದಿಂದ ರಾಯಣ್ಣನನ್ನು ಹೆಡಮುರಿಗಿ ಕಟ್ಟಿ ನಂದಗಡದಲ್ಲಿ ನೇಣು ಹಾಕಿದ ಕಥೆ ಇಂದಿಗೂ ಕನ್ನಡಿಗರ ಕರುಳನ್ನು ಕತ್ತರಿಸುವ ಕಥೆಯಾಗಿದೆ. ದೇಶಭಕ್ತಿಯನ್ನು ಕೆರಳಿಸುತ್ತದೆ. ರಾಯಣ್ಣ ಏಳು ಅಡಿ ಎತ್ತರದ ಆಳು. ಹಾಗಾಗಿ ಆತನಿಗೆ ಎಂಟು ಅಡಿ ಉದ್ದದ ಸಮಾಧಿಯನ್ನು ನಂದಗಡದ ಬಳಿ ಕಟ್ಟಿದ್ದಾರೆ. ಇಂದಿಗೂ ಸಹ ರಾಯಣ್ಣನಿಗೆ ನಡೆದುಕೊಳ್ಳುವ ಜನರಿದ್ದಾರೆ. ರಾಯಣ್ಣ ಕನ್ನಡ ಜಾನಪದ ಕಾವ್ಯ ಪ್ರಕಾರಗಳಲ್ಲಿ ಅಮರನಾಗಿದ್ದಾನೆ. ರಾಯಣ್ಣ ಜೀವನ ಚರಿತ್ರೆಯನ್ನಾಧರಿಸಿದ ನಾಟಕಗಳು ಪ್ರಸಿದ್ಧವಾಗಿವೆ. ರಾಯಣ್ಣನನ್ನು ಕುರಿತು 1976ರಲ್ಲಿ ಹಾಗೂ 2012ರಲ್ಲಿ ಎರಡು ಚಿತ್ರಗಳು ನಿರ್ಮಾಣವಾಗಿವೆ.
|
| |
|
|
|
|
|
|
|
|