|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಕ್ಕಳಿಗೆ ಮನರಂಜನೆಯೊಂದಿಗೆ ಬುದ್ಧಿಶಕ್ತಿಯನ್ನು ಚುರುಕುಗೊಳಿಸುವ ಗುಣ ಇಲ್ಲಿನ ಕಥೆಗಳಿಗಿದೆ. ಹಿರಿಯರು ಕಥೆಗಳ ಮೂಲಕ ಚಿಕ್ಕಂದಿನಿಂದಲೇ ಹೇಳಿದ ಅರಿವಿನ ಪಾಠ ಅವರಲ್ಲಿ ಚೆನ್ನಾಗಿ ಬೇರೂರಿ ಸನ್ನಡತೆ ರೂಢಿಸಿಕೊಳ್ಳಲು ಪ್ರೇರೇಪಿಸುತ್ತದೆ. ಜೊತೆಗೆ ಕೆಟ್ಟದಾರಿ ಹಿಡಿದವನಿಗೆ ಕೇಡು ತಪ್ಪದು - ಒಳ್ಳೆಯ ಅಭ್ಯಾಸ ರೂಢಿಸಿಕೊಂಡವರಿಗೆ ಒಳಿತಾಗುವುದೆಂಬ ನೀತಿಯೂ ಈ ಕಥೆಗಳ ಉದ್ದಕ್ಕೂ ಹಾಸುಹೊಕ್ಕಾಗಿದ್ದು ಎಳೆಯ ಮನಸ್ಸಿಗೆ ನಾಟುವಂತೆ ಹೇಳಲಾಗಿದೆ. ಅಷ್ಟಲ್ಲದೆ ನಮ್ಮ ಸುತ್ತಲ ಪರಿಸರದಲ್ಲಿನ ಕಾಡು-ಬೆಟ್ಟ-ನದಿ-ಪ್ರಾಣಿ-ಪಕ್ಷಿ-ಆಕಾಶ-ಮೋಡ ಮುಂತಾದ ಪ್ರಕೃತಿಯ ಹತ್ತು ಹಲವು ವಿಸ್ಮಯಕರ ಸಂಗತಿಗಳನ್ನು ಮಕ್ಕಳು ಅರ್ಥೈಸಿಕೊಳ್ಲಬಲ್ಲರು. ಅವುಗಳ ಬಗ್ಗೆ ಪ್ರೀತಿ ಬೆಳೆಸಿಕೊಂಡು ಮುಂದೆ ತಮ್ಮ ಬದುಕಿನಲ್ಲಿ ಸಹಜೀವಿಗಳು ಹಾಗೂ ಪರಿಸರದ ಪಾತ್ರ ನಮ್ಮ ಉಳಿವಿಗೆ ಎಷ್ಟು ಅಗತ್ಯವೆಂದು ಮನಗಾಣಬಲ್ಲರು. ಉಸಿರುಗಟ್ಟಿಸುವ ಬಲತ್ಕಾರದ ಪಾಠ ಪ್ರವಚನಗಳಿಂದ ಬೇಸತ್ತ ಮಕ್ಕಳಿಗೆ ಸ್ವಲ್ಪ ಬಿಡುಗಡೆ-ಉತ್ಸಾಹ ತುಂಬುವಂಥ ಕಥೆಗಳಿವು. ನಿಮ್ಮ ಮಕ್ಕಳಿಗೆ ಓದಲು ಕೊಡಿ - ನಾವಿಂದು ಕಳೆದುಕೊಂಡ ಕೆಲವು ಮೌಲ್ಯಗಳನ್ನು ಪರಿಚಯಿಸಿ.
|
| |
|
|
|
|
|
|
|
|
|