|
|

| Rs. 1250 | 15% |
Rs. 1063/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಿ.ಎನ್.ಆರ್. ರಾವ್ ಅವರು ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರಾಚಾರ್ಯರು ಮತ್ತು ಲೈನಸ್ ಪಾಲಿಂಗ್ ಸಂಶೋಧನಾ ಪ್ರಾಚಾರ್ಯರಾಗಿದ್ದಾರೆ ಹಾಗೂ ಭಾರತೀಯ ವಿಜ್ಞಾನ ಮಂದಿರದಲ್ಲಿ ಗೌರವ ಪ್ರಾಚಾರ್ಯರಾಗಿದ್ದಾರೆ. ಪ್ರೊ. ರಾವ್ ಅವರು ಹಲವಾರು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪದಕಗಳನ್ನು ಪಡೆದಿರುತ್ತಾರೆ. ಇವುಗಳಲ್ಲಿ ಫ್ಯಾರಡೆ ಸೊಸೈಟಿಯ ಮಾರ್ಲೊ ಪದಕ, ಅಮೆರಿಕದ ಕೆಮಿಕಲ್ ಸೊಸೈಟಿಯ ಸೆಂಟಿನರಿ ಫೆಲೋಶಿಪ್, ಜೆಕೋಸ್ಲೋವ್ಯಾಕ್ ಅಕ್ಯಾಡಮಿಯ ಹೆವರೋವ್ಸಸ್ಕಿ ಪದಕ, ಯುನೆಸ್ಕೋದ ಆಲ್ಬರ್ಟ್ ಐನ್ಸ್ಟೈನ್ ಚಿನ್ನದ ಪದಕ ಹಾಗೂ ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ (ಲಂಡನ್) ಹ್ಯೂಸ್ ಪದಕ ಹಾಗೂ ರಾಯಲ್ ಪದಕ ಬಹಳ ಶ್ರೇಷ್ಠ. ಇವರು ಹಲವಾರು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಂದ 50 ಗೌರವ ಡಾಕ್ಟರ್ ಪದವಿಗಳನ್ನು ಪಡೆದಿದ್ದಾರೆ. ಇವರು 1500ಕ್ಕೂ ಹೆಚ್ಚು ಲೇಖನ್ಗಗಳನ್ನು ಪ್ರಕಟಿಸಿದ್ದಾರೆ ಹಾಗೂ 46ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಗಣನೀಯ ಸೇವೆಗಾಗಿ ಭಾರತ ಸರ್ಕಾರವು ಇವರಿಗೆ 2013ನೇ ಇಸವಿಯಲ್ಲಿ ತನ್ನ ಅತ್ಯುನ್ನದ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಿದೆ ಮತ್ತು ಕರ್ನಾಟಕ ಸರ್ಕಾರವು 2001ನೇ ಇಸವಿಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
|
|
| |
|
|
|
|
|
|
|
|
|