|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
189394 |
ಡುಂಡಿರಾಜ್ ಸಣ್ಣ ಪದ್ಯಗಳ ದೊಡ್ದ ಸರದಾರ. ಕವಿಯಾಗಿ ನಾಟಕಕಾರರಾಗಿ ಅಂಕಣಕಾರರಾಗಿ ಮನೆಮಾತಾದ ಜನಪ್ರಿಯ ಸಾಹಿತಿ ಅವರು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಡುಂಡಿರಾಜರ ಸಾಧನೆ ಒಂದು ಅಸಾಧಾರಣ ಮೈಲಿಗಲ್ಲು. ಹಾಸ್ಯದ ಹೊನಲನ್ನು ಹರಿಸುತ್ತಾ ಬಂದಿರುವ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕಾವ್ಯ, ಚುಟುಕು, ನಾಟಕ, ಪ್ರಬಂಧ, ವ್ಯಕ್ತಿಚಿತ್ರಗಳು, ಶಿಶು ಸಾಹಿತ್ಯ, ಪ್ರವಾಸ ಕಥನಗಳನ್ನು ರಚಿಸಿ ಅವುಗಳಲ್ಲಿ ಜೀವ ಚೈತನ್ಯ ತುಂಬಿ ಕನ್ನಡ ಸಹೃದಯರ ಮನಸೂರೆಗೊಂಡ ಪ್ರತಿಭಾವಂತ ಲೇಖಕ. ಮೃದುಹಾಸ್ಯ, ವ್ಯಂಗ್ಯ, ವಿಡಂಬನೆ, ಸೂಕ್ಷ್ಮ ಚಿಂತನೆ, ಸಮಾಜ ವಿಮರ್ಶೆಯಿಂದ ಕೂಡಿರುವ ಅವರ ಕೃತಿಗಳು ಓದುಗರಿಗೆ ಆಪ್ಯಾಯಮಾನವಾದ ಅನುಭವವನ್ನು ಉಣಬಡಿಸುತ್ತಾ ಬಂದಿವೆ. ಡುಂಡಿರಾಜರ ಪದಲಾಲಿತ್ಯಕ್ಕೆ ಬೆರಗಾದವರಿಲ್ಲ.
ಡುಂಡಿರಾಜರ ಹನಿಗವನಗಳಿಂದ ಪ್ರಭಾವಿತರಾಗಿ ಅದೇ ಮಾದರಿಯಲ್ಲಿ ಕಿರು ಕವಿತೆಗಳನ್ನು ರಚಿಸುತ್ತಾ ಬಂದವರ ಸಂಖ್ಯೆ ಬಹಳ ದೊಡ್ಡದು. ಕಾವ್ಯದ ಸಿದ್ಧ ಮಾದರಿಯನ್ನು ಬಿಟ್ಟುಕೊಟ್ಟು, ಹೊಸ ಮಾದರಿಯ ಕವಿತೆಗಳನ್ನು ರಚಿಸಿ ಅಪಾರ ಓದುಗ ವರ್ಗವನ್ನು ಖುಷಿಪಡಿಸಿದ ಅಪರೂಪದ ಸಾಹಿತಿ ಡುಂಡಿರಾಜ್. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವರು ಮಾಡಿರುವ ವಿವಿಧ ಪ್ರಯೋಗಗಳು ಗಮನಿಸುವಂಥದ್ದಾಗಿವೆ. ಗದ್ಯ-ಪದ್ಯಗಳನ್ನು ಬಳಸಿ ಬೆರೆಸಿ ‘ನವಚಂಪೂ’ ಶೈಲಿಯನ್ನು ಚಾಲ್ತಿಗೆ ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಡುಂಡಿರಾಜ್ ಅವರ ಮನಸ್ಸು ಅನಂತಮುಖವಾದುದು, ಅಷ್ಟೇ ಸೃಜನಶೀಲವಾದುದು. ಅವರ ಸಮಗ್ರ ಕೃತಿಗಳ ಕುರಿತು ಹೆಚ್ಚು ಚರ್ಚೆ ನಡೆದಿಲ್ಲ. ಆ ಕೊರತೆಯನ್ನು ತುಂಬಿ ಕೊಡುವ ಕಿರು ಪ್ರಯತ್ನ ಪ್ರಸ್ತುತ ಕೃತಿ.
|
| |
|
|
|
|
|
|
|
|
|