|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸೃಷ್ಟಿ ಪಬ್ಲಿಕೇಷನ್ಸ್, Srushti Publications |
ಈಗಿನ ಮುದ್ರಣದ ಸಂಖ್ಯೆ |
: |
6 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
176 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381244326 |
ಕೋಡ್ |
: |
189055 |
`ಯಾತ್ರಿಕನ ಕನಸು` ಕಾದಂಬರಿಯು ಜೀವನ ಸತ್ಯದ ಒಂದು ಹುಡುಕಾಟ. ಇದೊಂದು ಬದುಕಿನ ಗಮ್ಯದೆಡೆಗೆ ಸಾಗುವ ಸುದೀರ್ಘ ಪಯಣ. ಪಯಣಿಸುತ್ತಲೇ ವ್ಯಕ್ತಿತ್ವವನ್ನು ಮಾಗಿಸಿಕೊಳ್ಳುವ ಪ್ರಕ್ರಿಯೆ..! ಸಾಧಕನಾದವನು ಸಂತೃಪ್ತಿಯ ತುತ್ತತುದಿಯನ್ನು ಎಂದೂ ಮುಟ್ಟುವುದಿಲ್ಲ... ಅವನು ಅಲ್ಪತೃಪ್ತಿಯವನೂ ಅಲ್ಲ... ಅಂತಹ ಭ್ರಮೆಗೆ ಬೀಳುವವನು ಮೊದಲೇ ಅಲ್ಲ. ಅವನು... ಅತ್ಯುಚ್ಛ ಕನಸಿನ ಬೆನ್ನತ್ತಿ ಜೀವನ ಸತ್ಯವನ್ನು ಸ್ಪರ್ಶಿಸಿ, ಸಾರ್ಥಕತೆಯನ್ನು ಕಂಡುಕೊಳ್ಳುವ ದೂರಗಾಮಿ...!
ಸಾಧಕನಿಗೆ ಗಮ್ಯವೇ ಜೀವನದ ಉಸಿರು. ಅದರ ಹಾದಿಯೇ ಚೈತನ್ಯ. ನಿರಂತರ ಪಯಣವೇ ಯಶೋ ಮೆಟ್ಟಿಲುಗಳು. ಎದುರಾಗುವ ಸೋಲು-ಗೆಲುವು, ಪ್ರೀತಿ-ದ್ವೇಷ ಮುಂತಾದವುಗಳೇ ಜೀವಂತಿಕೆ..! ಅವನು ತನ್ನ ಉದ್ದೇಶ ಸಾಧನೆಗಾಗಿ ಮಾಡುವ ನಿರಂತರ ಪ್ರಯತ್ನದಲ್ಲಿ ತಾನು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಿರುತ್ತದೆ.. ಆದರೆ ಅದು ಮೇಲ್ನೋಟಕ್ಕೆ ಕಾಣಿಸುವ ಅರ್ಧಸತ್ಯ ಮಾತ್ರ. ಸಾಧಕ ತನ್ನ ಸಾಧನೆಯ ಹಾದಿಯಲ್ಲಿ ತಾನು ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಪಡೆದುಕೊಳ್ಳುತ್ತಾ ಹೋಗುತ್ತಾನೆ. ಅದು ಭೌತಿಕವಾಗಿ ಆ ಕ್ಷಣಕ್ಕೆ ಕಾಣಿಸದೇ ಹೋಗಬಹುದು. ದಿನಗಳೆದಂತೆ ಆಂತರಂಗಿಕ ಮಾಗುವಿಕೆಯಿಂದ ಅದರ ಅರಿವಾಗುತ್ತಾ ಹೋಗುತ್ತದೆ. ಅಂಥದ್ದೊಂದು ಗಮ್ಯದೆಡೆಗೆ ಕೈಗೊಂಡ ಸುದೀರ್ಘ ಪ್ರಯಾಣವೇ ಈ ಯಾತ್ರಿಕನ ಕನಸು ಕಾದಂಬರಿಯ ಪ್ರಧಾನ ವಸ್ತು.
|
| | |
|
|
|
|
|
|
|
|